ಬೇಕಾಗುವ ಪದಾರ್ಥಗಳು…
- ಕುಂಬಳಕಾಯಿ – ಮೂರು ಬಟ್ಟಲು (ಕತ್ತರಿಸಿದ್ದು)
- ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)
- ಆಲೂಗಡ್ಡೆ- ಎರಡು
- ಬೆಣ್ಣೆ- ಒಂದು ಚಮಚ
- ಕಾಳುಮೆಣಸಿನ ಪುಡಿ – 1 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಮಾಡುವ ವಿಧಾನ...
- ಆಲೂಗಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಪ್ಯಾನ್ ಗೆ ಬೆಣ್ಣೆ ಹಾಕಿ ಬಿಸಿ ಮಾಡಿ. ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ.ಅದಕ್ಕೆ ಕತ್ತರಿಸಿ ಆಲೂಗಡ್ಡೆ ಹಾಗೂ ಕುಂಬಳಕಾಯಿ ಹೋಳುಗಳನ್ನು ಹಾಕಿ.
- ಒಂದು ಲೋಟ ನೀರು ಹಾಗೂ ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿ.ಹೋಳುಗಳು ಬೆಂದ ನಂತರ ಅದನ್ನು ತಣ್ಣಗಾಗಲು ಬಿಡಿ. ನಂತರ ಅದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
- ರುಬ್ಬಿದ ಮಿಶ್ರಣವನ್ನು ಮತ್ತೆ ಬಿಸಿ ಮಾಡಿ. ಬಿಸಿ ಮಾಡುವಾಗ ಕಾಳುಮೆಣಸಿನ ಪುಡಿ ಹಾಕಿ. ನಂತರ ಗಾರ್ಲಿಕ್ ಬ್ರೆಡ್ ಜೊತೆ ಸರ್ವ್ ಮಾಡಿ.