ಬೇಕಾಗುವ ಪದಾರ್ಥಗಳು…
- ಹಾಗಲಕಾಯಿ-1
 - ಟೊಮೆಟೊ-1
 - ಈರುಳ್ಳಿ-1
 - ಹಸಿ ಮೆಣಸಿನಕಾಯಿ-4
 - ಕಾಯಿ ತುರಿ-ಸ್ವಲ್ಪ
 - ಬೆಲ್ಲ-ಸ್ವಲ್ಪ
 - ಕೊತ್ತೊಂಬರಿ ಸೊಪ್ಪು- ಸ್ವಲ್ಪ
 - ಕಡಲೆಬೇಳೆ- ಸ್ವಲ್ಪ
 - ಉದ್ದಿನಬೇಳೆ- ಸ್ವಲ್ಪ
 - ಸಾಸಿವೆ- ಸ್ವಲ್ಪ
 - ಕರಿಬೇವು- ಸ್ವಲ್ಪ
 - ಅರಿಶಿಣ- ಸ್ವಲ್ಪ
 - ಹಿಂಗು-ಚಿಟಿಕೆ
 - ಎಣ್ಣೆ-ಸ್ವಲ್ಪ
 - ವಿಧಾನ ವಿಧಾನ…
- ಹಾಗಲಕಾಯಿ, ಟೊಮೆಟೊ, ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು.
 - ಒಂದು ಬಾಣಲೆಗೆ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನಬೇಳೆ, ಸಾಸಿವೆ, ಕರಿಬೇವು, ಅರಿಶಿಣ, ಹಿಂಗು, ಹಸಿ ಮೆಣಸಿನ ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಹೆಚ್ಚಿದ ಹಾಗಲಕಾಯಿ ಹಾಕಿ 2 ನಿಮಿಷ ಹುರಿದುಕೊಳ್ಳಿ.
 - ನಂತರ ಟೊಮೆಟೊ, ಈರುಳ್ಳಿ, ಉಪ್ಪು, ಬೆಲ್ಲ ಹಾಕಿ ಹುರಿಯಬೇಕು.
 - ಕೊನೆಯಲ್ಲಿ ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಹಾಗಲಕಾಯಿ ಟೊಮೆಟೊ ಪಲ್ಯ ಸವಿಯಲು ಸಿದ್ಧ.
 
 
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ
				
															
                    
                    
                    
































