ರಾಮನಗರ: ಬೆಳಗಿನ ಹೊತ್ತು ತೋಟಕ್ಕೆ ನೀರು ಬಿಡುಲು ಹೋದ ರೈತನನ್ನು ಒಂಟಿ ಸಲಗ ತುಳಿದು ಬಲಿ ಪಡೆದುಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನಿ ಹಳ್ಳಿಕೆರೆದೊಡ್ಡಿಯಲ್ಲಿ ನಡೆದಿದೆ.
64 ವರ್ಷದ ಉರ್ಫ್ ತಿಮ್ಮಪ್ಪ ಆನೆ ತುಳಿತದಿಂದ ಬರ್ಬರವಾಗಿ ಸಾವಾಗೀಡಾದವರು.
ಐದು ಗಂಟೆ ಸುಮಾರಿಗೆ ನೀರು ಬಿಡಲು ತೆರಳಿದ್ದ ತಂದೆ, ಇನ್ನೂ ಯಾಕೆ ಮನೆಗೆ ಬಂದಿಲ್ಲ ಎಂದು ನೋಡಲು ಹೋದಾಗ ತೋಟದಲ್ಲೇ ತಂದೆ ಶವ ಬಿದ್ದಿದ್ದು ಕಂಡು ಬಂದಿದೆ . ಹಲವು ದಿನಗಳಿಂದ ಆನೆಗಳ ಗುಂಪು ಊರಿನ ಸಮೀಪ ಬರುತ್ತಿದ್ದು, ಕೂಡಲೇ ಅವುಗಳನ್ನು ಕಾಡಿಗೆ ಓಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದರು. ಅಲ್ಲದೆ ಕಾಡಾನೆಗಳ ಗುಂಪು ಹಗಲಿನಲ್ಲಿಯೂ ಊರು ಪ್ರವೇಶ ಮಾಡುತ್ತಿದ್ದು, ಸೂಕ್ತ ಭದ್ರತೆ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ತಿಮ್ಮಯ್ಯನವರ ಮೃತದೇಹ ಪರಿಶೀಲನೆ ಮಾಡಲು ಬಂದ ಅರಣ್ಯಾಧಿಕಾರಿಗಳ ವಿರುದ್ಧ ಕಿಡಿ ಕಾರಿದ ಗ್ರಾಮಸ್ಥರು, ‘ಸತ್ತ ಮೇಲೆ ಬಂದು ಮಾತಾನಾಡುವುದು ಬೇಡ, ಮೊದಲೇ ಆನೆ ಓಡಿಸುವ ಕೆಲಸ ಮಾಡಿದ್ರೆ ತಿಮ್ಮಯ್ಯ ಬದುಕುತ್ತಿದ್ದರು ಎಂದು ನೊಂದಿರುವ ನುಡಿ ನುಡಿದಿದ್ದಾರೆ. ಅಲ್ಲದೆ ಡಿ ಸಿ ಎಂ ಡಿ ಕೆ ಶಿವಕುಮಾರ್ ಕೂಡ ಅಧಿಕಾರಿಗಳಿಗೆ ಕರೆ ಮಾಡಿ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.