ಬಾಲಿವುಡ್ ಸ್ಟಾರ್ ಶಾರುಕ್ ಖಾನ್ ಪಠಾಣ್ ಸಿನಿಮಾದ ಸಕ್ಸಸ್ ನಂತರ ಇದೀಗ ಜವಾನ್ ಸಿನಿಮಾಕ್ಕಾಗಿ ಸಜ್ಜಾಗುತ್ತಿದ್ದಾರೆ. ಏತನ್ಮಧ್ಯೆ, ನಟ ಇತ್ತೀಚೆಗೆ ಯುನೈಟೆಡ್ ಸ್ಟೇಟ್ ನ ಲಾಸ್ ಏಂಜಲೀಸ್ನಲ್ಲಿ ಚಿತ್ರೀಕರಣದಲ್ಲಿ ಇರುವಾಗ ದುರಾದೃಷ್ಟಕರ ಘಟನೆಯೊಂದು ನಡೆದಿದೆ. ಚಿತ್ರೀಕರಣದ ವೇಳೆ ಶಾರುಖ್ ಮೂಗಿಗೆ ಗಾಯವಾಗಿದ್ದು, ಸಣ್ಣ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದ್ದು, ನಟ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಇದರಿಂದ ಅಭಿಮಾನಿಗಳು ಕೊಂಚ ನಿರಾಳರಾಗಿದ್ದಾರೆ. ಏಂಜಲೀಸ್ ನಲ್ಲಿ ಯಾವ ಪ್ರಾಜೆಕ್ಟ್ ಚಿತ್ರೀಕರಣ ಅನ್ನುವುದನ್ನು ತಂಡ ಇನ್ನೂ ಎಲ್ಲಿ ಕೂಡ ಬಹಿರಂಗ ಪಡಿಸಿಲ್ಲ. ಚಿತ್ರೀಕರಣ ವೇಳೆ ಮೂಗಿನಲ್ಲಿ ರಕ್ತ ಸ್ರಾವವಾಗಲು ಆರಂಭವಾಗಿದೆ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ ರಕ್ತಸ್ರಾವ ನಿಲ್ಲಲು ಸಣ್ಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.ಮೂಗಿನ ಮೇಲೆ ಬ್ಯಾಂಡೇಜ್ ಹಾಕಿಕೊಂಡೇ ಶಾರುಕ್ ಮುಂಬೈ ಗೆ ಆಗಮಿಸಿ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ಶಾರುಖ್ ಖಾನ್ ಅವರ ಜವಾನ್‌ನ ಬಹುನಿರೀಕ್ಷಿತ ಟ್ರೇಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ, ಹಾಗೂ ಸಿನಿ ತಂಡ ರಿಲೀಸ್ ಡೇಟ್ ಎನೌಂನ್ಸ್ ಮಾಡುವುದನ್ನು ಕೇಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಸಿನಿಮಾದಲ್ಲಿ ಕಿಂಗ್ ಖಾನ್ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರಂತೆ.ಒಟ್ಟಿನಲ್ಲಿ ಬ್ಯಾಕ್ ಟು ಬ್ಯಾಕ್ ಸೋಲನ್ನೇ ಕಂಡಿದ್ದ ಶಾರುಕ್ ಸಿನಿ ಜರ್ನಿ ಮತ್ತೆ ಚಿಗುರೊಡೆದು ಯಶಸ್ಸಿನ ಪಥದೆಡೆ ಸಾಗುತ್ತಿರುವುದು ಸುಳ್ಳಲ್ಲ.
[vc_row][vc_column]
BREAKING NEWS
- ವಂಚನೆ ಪ್ರಕರಣ: ಆರೋಪಿ ಚೈತ್ರಾ ಕುಂದಾಪುರ, ಶ್ರೀಕಾಂತ್ಗೆ ಜಾಮೀನು
- ಪ್ರಾಂಜಲ್ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಚೆಕ್ ಇಂದು ಹಸ್ತಾಂತರ: ಸಿಎಂ
- ತೆಲಂಗಾಣ ಸಿಎಂ ಆಯ್ಕೆ ತೀರ್ಮಾನ ಎಐಸಿಸಿ ಅಧ್ಯಕ್ಷರ ಹೆಗಲಿಗೆ: ಡಿಕೆಶಿ
- ಮಿಚಾಂಗ್ ಅಬ್ಬರಕ್ಕೆ ಮುಳುಗಿದ ಚೆನ್ನೈ
- ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ – ಬೆಂಗಳೂರು ಸೇರಿ ರಾಜ್ಯದ 63 ಕಡೆ ದಾಳಿ
- 200 ಟನ್ ಮೆಕ್ಕೆಜೋಳ ಕುಸಿತ ಪ್ರಕರಣ: ಮೂವರು ಕಾರ್ಮಿಕರ ಸಾವು
- ಬ್ರೇಕಿಂಗ್ ಇಂದು ಬೆಳ್ಳಂಬೆಳಗ್ಗೆ 63 ಕಡೆ ಲೋಕಾಯುಕ್ತ ದಾಳಿ.!
- ತಡರಾತ್ರಿ ಫುಡ್ಸ್ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಮೆಕ್ಕೆಜೋಳ ಕುಸಿತ ಮೂವರು ಸಾವು.!
- ಮಿಚಾಂಗ್ ಚಂಡಮಾರುತ ಎಫೆಕ್ಟ್ ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಳೆ.!
- ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ