ಮುಂಬೈ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಇಂದು ರಾಜ್ಯದ ಎಂಟು ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಈ ಬಾರಿ ಏಳು ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದೆ.
ಏಪ್ರಿಲ್ 19 ರಂದು ಮತದಾನ ನಡೆಯಲಿರುವ ರಾಮ್‌ಟೆಕ್ ಕ್ಷೇತ್ರದಿಂದ ಇತ್ತೀಚೆಗೆ ಶಿವಸೇನಾ ಸೇರಿದ್ದ ಮಾಜಿ ಕಾಂಗ್ರೆಸ್ ಶಾಸಕ ರಾಜು ಪರ್ವೆಗೆ ಟಿಕೆಟ್ ನೀಡಲಾಗಿದೆ. ಶಿವಸೇನಾದ ಹಾಲಿ ಸಂಸದ ಕೃಪಾಲ್ ತುಮಾನೆ ಅವರಿಗೆ ಕೋಕ್ ನೀಡಿ ರಾಜು ಪರ್ವೆಗೆ ಸ್ಥಾನ ನೀಡಲಾಗಿದೆ.
ಪಟ್ಟಿಯಲ್ಲಿರುವ ಇತರ ಏಳು ಹೆಸರುಗಳು ಎಲ್ಲಾ ಹಾಲಿ ಸಂಸದರದ್ದು. ಮುಂಬೈ ಸೌತ್ ಸೆಂಟ್ರಲ್ ಕ್ಷೇತ್ರದಿಂದ ರಾಹುಲ್ ಶೆವಾಲೆ, ಕೊಲ್ಹಾಪುರ ಕ್ಷೇತ್ರದಿಂದ ಸಂಜಯ್ ಮಾಂಡ್ಲಿಕ್, ಶಿರಡಿ ಕ್ಷೇತ್ರದಿಂದ ಸದಾಶಿವ ಲೋಖಂಡೆ, ಬುಲ್ಧಾನ ಕ್ಷೇತ್ರದಿಂದ ಪ್ರತಾಪ್ ರಾವ್ ಜಾಧವ್, ಹಿಂಗೋಲಿ ಕ್ಷೇತ್ರದಿಂದ ಹೇಮಂತ್ ಪಾಟೀಲ್, ಮಾವಲ್ ಕ್ಷೇತ್ರದಿಂದ ಶ್ರೀರಂಗ್ ಬರ್ನೆ, ಹಟಕಣಂಗಲೆ ಕ್ಷೇತ್ರದಿಂದ ಧೈರ್ಯಶೀಲ ಮನೆ ಅವರು ಕಣಕ್ಕಿಳಿಯಲಿದ್ದಾರೆ.