ಚನ್ನಗಿರಿ : ಅಡಿಕೆ ಬೆಲೆ ಹೆಚ್ಚಾದ ಸಂಧರ್ಭದಲ್ಲಿ ರೈತರ ಬಗ್ಗೆ ಮಾತನಾಡುವ ಸಂಸದ ರಾಘವೇಂದ್ರ, ಬೆಲೆ ಕಡಿಮೆಯಾದಾಗ ಮಾತ್ರ ಮೌನ ವೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇತ್ತೀಚಿಗೆ ಶಿವಮೊಗ್ಗದಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ಸಂಸದ ರಾಘವೇಂದ್ರ ಕಳೆದ ಡಿಸೆಂಬರ್ ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಅವರ ಜಿಲ್ಲೆಯವರೇ ಹಾಗೂ ಪಕ್ಷದ ಶಾಸಕರಾದ ಆರಗ ಜ್ಞಾನೇಂದ್ರ ಅಡಿಕೆ ಬೆಳೆ ಬೆಳೆಯುವುದು ಮಾರಕ ಎಂದು ಹೇಳಿದಾಗ ಸಂಸದ ರಾಘವೇಂದ್ರ ಅವರು ಎಲ್ಲಿ ಹೋಗಿದ್ದರು ಎಂದು ಹೇಳಿದರು.
ಯುಪಿಎ ಸರ್ಕಾರವಿದ್ದಾಗ ಆಮದು ಶುಲ್ಕ ಹೆಚ್ಚಾಗಿತ್ತು, ಬಿಜೆಪಿ ಸರ್ಕಾರ ಬಂದ ಮೇಲೆ ಕಡಿಮೆಯಾಗಿದೆ ಎಂದು ರೈತರು ಹಾಗೂ ಜನರನ್ನು ದಾರಿ ತಪ್ಪಿಸುವ ಕೆಲಸವನ್ನ ಸಂಸದ ರಾಘವೇಂದ್ರ ಅವರು ಜಾಣ್ಮೆಯಿಂದ ಮಾಡಲು ಹೊರಟಿದ್ದಾರೆ.
ಲೋಕಸಭಾ ಚುನಾವಣೆ ಇರುವ ಹಿನ್ನೆಲೆ ಸೋಲಿನ ಭಯದಿಂದ ಇಂಥ ಹೇಳಿಕೆ ನೀಡುತ್ತಿದ್ದಾರೆ. ಈಗಾಗಲೇ ರಾಜ್ಯದ ಜನರು ಬಿಜೆಪಿ ಸರ್ಕಾರವನ್ನ ತಿರಸ್ಕಾರ ಮಾಡಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲೂ ಸೋಲುತ್ತೇವೆ ಎಂಬ ಭಯದಿಂದ ಇಂಥ ಹೇಳಿಕೆ ನೀಡಿದ್ದಾರೆ ಎಂದು ಶಾಸಕರಾದ ಬಸವರಾಜು ವಿ ಶಿವಗಂಗಾ ತಿರುಗೇಟು ನೀಡಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ಭೂತಾನ್ ನಿಂದ ಭಾರತಕ್ಕೆ ವಾರ್ಷಿಕ 17 ಸಾವಿರ ಟನ್ ಹಸಿ ಅಡಿಕೆಯನ್ನು ಕನಿಷ್ಠ ಶುಲ್ಕವನ್ನೂ ಪಡೆಯದೇ ಆಮದು ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದೆ, ಇದು ಕರ್ನಾಟಕ ಸೇರಿದಂತೆ ಹಲವು ರಾಜ್ಯದ ಅಡಿಕೆ ಬೆಳೆಗಾರರಿಗೆ ಆತಂಕ ಉಂಟಾಗಿದ್ದು, ಕೆಲ ತಿಂಗಳಿಂದ ಬೆಲೆ ಹೆಚ್ಚಾಳವಾಗಿ ದ್ದು, ಕೇಂದ್ರ ಸರ್ಕಾರ ತೆಗೆದುಕೊಂಡ ಈ ನಿರ್ಧಾರ ರೈತ ನಿದ್ದೆಗೆಡಿಸಿದೆ.
ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತಲೇ ಇದೆ. ರೈತರ ಪರವಾಗಿ ಕಾಂಗ್ರೆಸ್ ಇದೆ ಹೊರತು, ಬಿಜೆಪಿ ಅಲ್ಲ ಎಂದು ಶಾಸಕ ಬಸವರಾಜು ವಿ ಶಿವಗಂಗಾ ತಿರುಗೇಟು ನೀಡಿದರು.