Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ವಂದೇ ಭಾರತ್ ರೈಲಿನ 8 ಸಾವಿರ ಕೋಚ್‌ಗಳನ್ನು ನಿರ್ಮಿಸಲು ಯೋಜನೆ

0

ಚೆನ್ನೈ: ಭಾರತದ ಹೈಸ್ಪೀಡ್ ರೈಲು ಯೋಜನೆ ಅಡಿ ಈಗಾಗಲೇ ವಂದೇ ಭಾರತ್ ರೈಲು ದೇಶದ ಪ್ರಮುಖ ನಗರಗಳಲ್ಲಿ ಸಂಚಾರ ನಡೆಸುತ್ತಿದೆ‌. ಇದಕ್ಕೆ ರೈಲು ಪ್ರಯಾಣಿಕರಿಂದ ಉತ್ತಮ ಸ್ಪಂದನೆಯೂ ದೊರೆತಿ‍ದೆ. ಈ ಎಲ್ಲ ರೈಲುಗಳು ತಯಾರಾಗಿದ್ದು ಚೆನ್ನೈ ನಗರದಲ್ಲಿ. ಅದರ ಹೆಗ್ಗಳಿಕೆಯನ್ನು ಚೆನ್ನೈ ಪಡೆದುಕೊಂಡಿದೆ. ಇದಕ್ಕೆ ಸೇರ್ಪಡೆ ಎಂಬಂತೆ ವಂದೇ ಭಾರತ್ ರೈಲಿಗಾಗಿ ಸುಮಾರು 8 ಸಾವಿರ ಬೋಗಿಗಳನ್ನು ಸಿದ್ಧಪಡಿಸಲು ಯೋಜನೆ ರೂಪಿಸಲಾಗಿ‍ದೆ. ಇದರಲ್ಲಿ 1600 ಬೋಗಿಗಳು ಚೆನ್ನೈ ನಗರದ ಉತ್ಪಾದನಾ ಘಟಕದಲ್ಲಿ ತಯಾರಾಗಲಿವೆ. ಜೊತೆಗೆ ರಾಯಬರೇಲಿ ನಗರದ ಉತ್ಪಾದನಾ ಘಟಕದಲ್ಲೂ ಸ್ಲೀಪರ್ ಕೋಚ್ ಸಹಿತ ವಂದೇ ಭಾರತ್ ಬೋಗಿಗಳು ಸಿದ್ಧವಾಗಲಿವೆ. ಈ ಎಲ್ಲ ಬೋಗಿಗಳು 2030-31ರಲ್ಲಿ ಸಿದ್ದವಾಗಲಿವೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.