ವಿಜಯನಗರ: ಇಸ್ರೇಲ್-ಹಮಾಸ್ ಯುದ್ಧದಲ್ಲಿ ಭಾರತವು ಇಸ್ರೇಲ್ ಗೆ ಬೆಂಬಲ ಸೂಚಿಸಿದೆ. ಆದರೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಮುಸ್ಲಿಂ ಯುವಕನೋರ್ವ ಹಮಾಸ್ ಉಗ್ರರನ್ನ ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿ ಪೊಲೀಸರ ವಶವಾಗಿದ್ದಾನೆ ಹೊಸಪೇಟೆ ನಿವಾಸಿ ನವಾಜ್ ಹಮಾಸ್ ಉಗ್ರರಿಗೆ ಬೆಂಬಲಿಸಿ ಸ್ಟೇಟಸ್ ಹಾಕಿದ ಯುವಕ. ಆರೋಪಿಯು ವಿಜಯನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷನ ಸಂಬಂಧಿ ಎಂದು ತಿಳಿದು ಬಂದಿದೆ. ಯುವಕ ನವಾಜ್ ‘ಪ್ಯಾಲೆಸ್ತೀನ್ ಜಿಂದಾಬಾದ್’ ಎಂದು ಬರೆದುಕೊಂಡಿದ್ದ. ಅಲ್ಲದೇ ನಾನು ಪ್ಯಾಲೆಸ್ತೀನ್ ಪರವಾಗಿದ್ದೇನೆ ಎಂದು ಬೆಂಬಲ ಸೂಚಿಸುವ ಪ್ರಚೋದನಕಾರಿ ಸ್ಟೇಟಸ್ ಹಾಕಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಹೊಸಪೇಟೆ ನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದು, ಆರೋಪಿ ನವಾಜ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.


































