ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಟೀಂ ಇಂಡಿಯಾ ಗಾಯಾಳು ಆಟಗಾರರ ಫಿಟ್ನೆಸ್ ಸಂಬಂಧಿಸಿದಂತೆ ಬಿಸಿಸಿಐ ಗುಡ್ ನ್ಯೂಸ್ ಕೊಟ್ಟಿದೆ. ಇಂಜುರಿ ಸಮಸ್ಯೆಯಿಂದಾಗಿ ಕೆಲವು ತಿಂಗಳುಗಳಿಂದ ಟೀಂ ಇಂಡಿಯಾದಿಂದ ಹೊರಗಿರುವ ತಂಡದ ಪ್ರಮುಖ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ರಿಷಬ್ ಪಂತ್ ಸೇರಿದಂತೆ 5 ಆಟಗಾರರ ಫಿಟ್ನೆಸ್ ರಿಪೋರ್ಟ್ ಅನ್ನು ಬಿಸಿಸಿಐ ಹಂಚಿಕೊಂಡಿದೆ. ಪ್ರಸ್ತುತ ಈ ಎಲ್ಲಾ ಐವರು ಆಟಗಾರರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್‌ನಲ್ಲಿದ್ದು, ಈ ಐದು ಆಟಗಾರರು ಪಂದ್ಯಕ್ಕೆ ಎಷ್ಟು ಫಿಟ್ ಆಗಿದ್ದಾರೆ. ಅವರು ಯಾವಾಗ ಮೈದಾನಕ್ಕೆ ಮರಳಲಿದ್ದಾರೆ ಎಂಬುದರ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದೆ. ಬಿಸಿಸಿಐ ನೀಡಿರುವ ಮಾಹಿತಿ ಪ್ರಕಾರ ಭಾರತದ ಇಬ್ಬರು ಸ್ಟಾರ್ ವೇಗದ ಬೌಲರ್‌ಗಳಾದ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ತಮ್ಮ ರಿಹ್ಯಾಬ್ನ ಅಂತಿಮ ಹಂತದಲ್ಲಿದ್ದು, ಎನ್ಸಿಎ ನಡೆಸಲ್ಲಿರುವ ಅಭ್ಯಾಸ ಪಂದ್ಯದಲ್ಲಿ ಈ ಇಬ್ಬರು ಕಣಕ್ಕಿಳಿಯಲ್ಲಿದ್ದಾರೆ. ಅದರಲ್ಲಿ ಈ ಇಬ್ಬರ ಫಿಟ್ನೆಸ್ ಗಮನಿಸಿದ ಬಳಿಕ ವೈದ್ಯಕೀಯ ತಂಡ ಇವರ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲ್ಲಿದೆ. ಹಾಗೆಯೇ ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಬಗ್ಗೆಯೂ ಮಾಹಿತಿ ನೀಡಿದ್ದು, ಈ ಇಬ್ಬರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಪ್ರಸ್ತುತ ಸ್ಟ್ರೆಂಥ್ ಮತ್ತು ಫಿಟ್‌ನೆಸ್ ವ್ಯಾಯಾಮ ಮಾಡುತ್ತಿರುವ ಈ ಇಬ್ಬರು ಬ್ಯಾಟರ್ಗಳ ಪ್ರಗತಿ ಬಿಸಿಸಿಐ ವೈದ್ಯಕೀಯ ತಂಡಕ್ಕೆ ಸಂತಸ ತಂದಿದೆ.ಅದೇ ಸಮಯದಲ್ಲಿ, ಕಳೆದ ವರ್ಷಾಂತ್ಯದಲ್ಲಿ ರಸ್ತೆ ಅಪಘಾತದಿಂದಾಗಿ ಕ್ರಿಕೆಟ್‌ನಿಂದ ದೂರವಿರುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೂಡ ಚೇತರಿಕೆಯ ಹಾದಿಯಲ್ಲಿದ್ದಾರೆ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಪಂತ್, ನೆಟ್ಸ್‌ನಲ್ಲಿ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಅಭ್ಯಾಸವನ್ನೂ ಆರಂಭಿಸಿದ್ದಾರೆ.
[vc_row][vc_column]
BREAKING NEWS
- ವಂಚನೆ ಪ್ರಕರಣ: ಆರೋಪಿ ಚೈತ್ರಾ ಕುಂದಾಪುರ, ಶ್ರೀಕಾಂತ್ಗೆ ಜಾಮೀನು
- ಪ್ರಾಂಜಲ್ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಚೆಕ್ ಇಂದು ಹಸ್ತಾಂತರ: ಸಿಎಂ
- ತೆಲಂಗಾಣ ಸಿಎಂ ಆಯ್ಕೆ ತೀರ್ಮಾನ ಎಐಸಿಸಿ ಅಧ್ಯಕ್ಷರ ಹೆಗಲಿಗೆ: ಡಿಕೆಶಿ
- ಮಿಚಾಂಗ್ ಅಬ್ಬರಕ್ಕೆ ಮುಳುಗಿದ ಚೆನ್ನೈ
- ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ – ಬೆಂಗಳೂರು ಸೇರಿ ರಾಜ್ಯದ 63 ಕಡೆ ದಾಳಿ
- 200 ಟನ್ ಮೆಕ್ಕೆಜೋಳ ಕುಸಿತ ಪ್ರಕರಣ: ಮೂವರು ಕಾರ್ಮಿಕರ ಸಾವು
- ಬ್ರೇಕಿಂಗ್ ಇಂದು ಬೆಳ್ಳಂಬೆಳಗ್ಗೆ 63 ಕಡೆ ಲೋಕಾಯುಕ್ತ ದಾಳಿ.!
- ತಡರಾತ್ರಿ ಫುಡ್ಸ್ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಮೆಕ್ಕೆಜೋಳ ಕುಸಿತ ಮೂವರು ಸಾವು.!
- ಮಿಚಾಂಗ್ ಚಂಡಮಾರುತ ಎಫೆಕ್ಟ್ ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಳೆ.!
- ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ