ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಉತ್ತರ ಪ್ರದೇಶ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯ ಹಾಲ್ ಟಿಕೆಟ್ ವೈರಲ್ ಆಗಿದೆ.
ಪೊಲೀಸ್ ನೇಮಕಾತಿ&ಬಡ್ತಿ ಮಂಡಳಿಯ ವೆಬ್ಸೈಟ್ನಲ್ಲಿ ಸಿವಿಲ್ ಪೊಲೀಸ್ ಹುದ್ದೆಗಾಗಿ ನೋಂದಣಿ ಮಾಡಲಾಗಿದ್ದು, ಪರೀಕ್ಷಾ ಕೇಂದ್ರ ಕನೌಜ್ನ ಬಾಲಕಿಯರ ಕಾಲೇಜು ಎಂದು ಉಲ್ಲೇಖಿಸಲಾಗಿದೆ.
ನೋಂದಣಿ ಸಮಯದಲ್ಲಿ ಬಳಸಲಾದ ಮೊಬೈಲ್ ಸಂಖ್ಯೆ ಯುಪಿಯ ನಿವಾಸಿಯದ್ದಾಗಿದೆ. ಆದರೆ ಈ ಹಾಲ್ ಟಿಕೆಟ್ ನೊಂದಿಗೆ ಪರೀಕ್ಷೆಗೆ ಯಾವುದೇ ಅಭ್ಯರ್ಥಿ ಹಾಜರಾಗಿಲ್ಲ ಎಂದು ಕಾಲೇಜು ಆಡಳಿತ ಹೇಳಿದೆ. ಕನೌಜ್ ಸೈಬರ್ ಸೆಲ್ ಪ್ರಕರಣದ ತನಿಖೆ ನಡೆಸುತ್ತಿದೆ.