ಸಮತಾವಾದಿ ಬಸವಣ್ಣನವರ ಜಯಂತಿ ಆಚರಣೆ ಬಗ್ಗೆ ಒಂದಿಷ್ಟು ಮಾಹಿತಿ.!

WhatsApp
Telegram
Facebook
Twitter
LinkedIn

 

ಬರುವ ಹತ್ತರಂದು ನಾಡಿನಲ್ಲಿ ಅಭಿಮಾನಿಗಳು ಬಹುಸಂಭ್ರಮದಿಂದ ಅವರ ವಿಚಾರ ಪರ ಚಿಂತನೆಗೆ ಒತ್ತು ಕೊಟ್ಟು ಆಚರಿಸುತ್ತಾರೆ. ಅಂತೆಯೇ ಬಸವಣ್ಣನವರು ತಾವು ಸ್ಥಾಪಿಸಿದ ಅನುಭವ ಮಂಟಪದ ಮೂಲಕ ಜಗತ್ತಿಗೆ ನೀಡಿದ ಆದರ್ಶ ಮೌಲ್ಯಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ” ರುದ್ರಮೂರ್ತಿ ಎಂ. ಜೆ

ಸಾಂಸ್ಕೃತಿಕ ನಾಯಕ ; ವಿಶ್ವಗುರು ; ಮಹಾ ಮಾನವತವಾದಿ ; ಬಂಡಾಯಗಾರ ಎಂಬೆಲ್ಲಾ ಉಪಮೆಗಳಿಂದ ಕರೆಯಲ್ಪಡುವ

ಬಸವಣ್ಣ ಮತ್ತವರ ಕಲ್ಯಾಣದ ಕೊಡುಗೆಗಳನ್ನು ಈ ಕೆಳಕಂಡಂತೆ ನೋಡಬಹುದು.

1.ವಿಶ್ವದ ಪ್ರಥಮ ಸಂಸತ್ತು- ಅನುಭವ ಮಂಟಪ. ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿರ್ಮಿತವಾದ ಅಪರೂಪದ ಮಹಾಸಂಸ್ಥೆ ನಿಸರ್ಗ ತತ್ವಕ್ಕೆ ಒತ್ತು ನೀಡಿ ಹೊಸತನದ ಸಂಚಲನ ಮೂಡಿಸಿದ ಮಂಟಪ.

2 .ಆರ್ಥಿಕ ಸಮಾನತೆ, ಸಾಮಾಜಿಕ,ಶೈಕ್ಷಣಿಕ, ಸಾಂಸ್ಕೃತಿಕ, ಏಕತೆಯಂತಹ ಶ್ರೇಷ್ಠ ಮತ್ತು ಉದಾತ ಧ್ಯೇಯಗಳು ಅನುಭವ ಮಂಟಪದ ಮೂಲ ಮಂತ್ರಗಳು.

  1. ರಾಜಕೀಯ ನೀತಿ : ಮಂತ್ರಿಗೂ -ಸೇವಕನಿಗೂ ಸಮಾನ ಗೌರವ.

4 . ಪರುಷಕಟ್ಟೆ -ಪ್ರಜೆಗಳ ಕಷ್ಟಗಳನ್ನು ಆಲಿಸುವ ‘ಜನಸ್ಪಂದನ’

  1. ಸಾಮಾಜಿಕ ನೀತಿ : ಸಮಾನತೆ

6 . ಶಿಕ್ಷಣ ನೀತಿ : ಸರ್ವರಿಗೂ ಸಾಕ್ಷರತೆ, ಮಾತೃಭಾಷಾ ಶಿಕ್ಷಣ

7 .ಆರ್ಥಿಕ ನೀತಿ – ಕಾಯಕ ಮತ್ತು ದಾಸೋಹ 8 .ಕಾಯಕದಲ್ಲಿ ಮೇಲು – ಕೀಳಲಿಲ್ಲ ಎನ್ನುವ ಪರಿಕಲ್ಪನೆ( ಡಿಗ್ನಿಟಿ ಆಫ್ ಲೇಬರ್)

9 .ಸಾಹಿತ್ಯ :  ಜಗತ್ತಿಗೆ ಕೊಟ್ಟ ಶ್ರೇಷ್ಠ ಕೊಡುಗೆ – ವಚನ ಸಾಹಿತ್ಯ

10 .ನಿರ್ಭಯ ಜಗತ್ತು ನಿರ್ಮಾಣ

11 . ಮನಶಾಸ್ತ್ರ – ವಿಜ್ಞಾನದ ಪರಿಕಲ್ಪನೆಯಲ್ಲಿ  : ಇಷ್ಟ ಲಿಂಗ

  1. ಧಾರ್ಮಿಕ ಸಮಾನತೆಯಾಗಿಯೂ ಇಷ್ಟಲಿಂಗ: “ಜನಸಾಮಾನ್ಯರಿಗೆ ಮರೀಚಿಕೆಯಾದ ದೇವರು ಅಂಗೈಯಲ್ಲಿ”

13 .ವಿಶ್ವಸಂಸ್ಥೆಯ ಈಗಿನ ಎಲ್ಲಾ ಕಾಯ್ದೆಗಳು, ಜಗತ್ತಿನ ಎಲ್ಲ ಪ್ರಜಾಸತ್ತಾತ್ಮಕ ಸಂವಿಧಾನಗಳ ಆಶಯಗಳೆಲ್ಲವೂ ಬಸವಣ್ಣನವರ ಆಶಯಗಳಲ್ಲಿವೆ.

  1. ಬಹುತೇಕ ದೇಶಗಳ – ವಿಶ್ವಸಂಸ್ಥೆಯ ನ್ಯಾಯಾಂಗ ವ್ಯವಸ್ಥೆಯ ಆಶಯಗಳೆಲ್ಲವೂ ಬಸವ ಯುಗದ ಕೊಡುಗೆ.

15 . ಪರಿಸರವಾದ – ಜಾಗತಿಕ ಶಾಂತಿ :  ಬಸವಯೋಗದ ಪರಿಕಲ್ಪನೆಗಳು

16 . ಮಾರ್ಟಿನ್ ಲೂಥರ್ ಗಿಂತ ಮೊದಲು – ಜಡವ್ಯವಸ್ಥೆಯ ವಿರುದ್ಧ ದಂಗೆ ಎದ್ದ “ಪ್ರಥಮ ಬಂಡಾಯ ” ಬಸವಣ್ಣನವರದ್ದು

17 . ಮಾನವೀಯತೆ, ಪ್ರಶ್ನಿಸುವಿಕೆ, ವೈಚಾರಿಕತೆ, ವಿಮರ್ಶಾ ಪ್ರವೃತ್ತಿ, ಸ್ವತಂತ್ರ ಚಿಂತನೆ, ಕೌತುಕತೆ, ಜಾತ್ಯತೀತತೆ – ಮಾರ್ಟಿನ್ ಲೂಥರ್ ನ.ಮತ ಸುಧಾರಣೆಯ ಏಳು ಅಂಶಗಳು. ಇವೆಲ್ಲವಗಳನ್ನೂ ಬಸವಣ್ಣನವರು ಮಾರ್ಟಿನ್ ಲೂಥರ್ ಗಿಂತ 200 ವರ್ಷಗಳ ಮೊದಲೇ ಕಲ್ಯಾಣದಲ್ಲಿ ಚಾಲನೆಗೆ ತಂದಿದ್ದರು.

18 .”ಶರಣತ್ವ” ಉದಯಿಸಿತು. “ಕಾಯಕ” ದೇವರನ್ನು ತಲುಪ ಮಾರ್ಗವಾಯಿತು.

19 . ಕಾಯಕ ಜೀವಿಗಳ ಮಹಾಸಾಮ್ರಾಜ್ಯ ನಿರ್ಮಾಣವಾಯಿತು.

20 .ಒತ್ತಡ ಹಾಕಿದಷ್ಟೂ ಚಿಮ್ಮುವ ಮಹಾ ಚಿಲುಮೆ ಬಸವ ತತ್ವ

21 .ಒಪ್ಪಿಕೊಳ್ಳುವ – ಒಪ್ಪಿಕೊಳ್ಳುವ ಗುಣ : ಈ ಕಾಲಘಟ್ಟದ ಜಾಗತಿಕ ಸೌಹಾರ್ದತೆಗೆ ಮಾರ್ಗದರ್ಶಿ

22 . ಅಷ್ಟಾವರಣಗಳು,ಷಟಸ್ಥಲಗಳು,  ಪಂಚಾಚಾರಗಳು – ಸರ್ವಕಾಲಿಕ ದಾರಿಯ ಬುತ್ತಿಗಳು

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon