ಕೊಲೊರಾಡೋ: ಕೊಲೊರಾಡೋದ ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಗುರುವಾರ ನಡೆದ ಪದವಿ ಸಮಾರಂಭದಲ್ಲಿ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಮರಳು ಚೀಲದ ಅಡಚಣೆಯಿಂದ ಮುಗ್ಗರಿಸಿ ಬಿದ್ದ ಘಟನೆ ನಡೆದಿದೆ.
80 ವರ್ಷದ ಜೋ ಬಿಡೆನ್ ಮುಂದಕ್ಕೆ ಬಿದ್ದಾಗ ತಮ್ಮ ಕೈಗಳನ್ನು ನೆಲಕ್ಕೆ ಊರಿದರು. ತಕ್ಷಣ ಮೂವರು ಸಿಬ್ಬಂದಿಗಳು ಮೇಲೆಳಲು ಸಹಾಯ ಮಾಡಿದಾಗ ಕೂಡಲೇ ಎದ್ದು ಮರಳಿ ತನ್ನ ಆಸನದ ಮೇಲೆ ಕುಳಿತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೊದಲ್ಲಿ, ಬಿಡೆನ್ ಯಾರ ಸಹಾಯವೂ ಇಲ್ಲದೆ, ನಡೆಯುತ್ತಿರುವುದು ಕಂಡುಬಂದಿದೆ.
https://bcsuddi.com/%e0%b2%95%e0%b2%b2%e0%b2%ac%e0%b3%81%e0%b2%b0%e0%b2%97%e0%b2%bf-%e0%b2%b2%e0%b2%be%e0%b2%a1%e0%b3%8d%e0%b2%b2%e0%b3%87-%e0%b2%ae%e0%b2%b6%e0%b2%be%e0%b2%95%e0%b3%8d-%e0%b2%a6%e0%b2%b0%e0%b3%8d/
ಬಿಡೆನ್ಗೆ ಸಹಾಯ ಮಾಡಿದ ಸಿಬ್ಬಂದಿಗಳಿಗೆ, ಎಡವಿರುವ ಕಾರಣ ಸೂಚಿಸುವಂತೆ ಕೆಳಕ್ಕಿರುವ ಮರಳು ಚೀಲವನ್ನು ತೋರಿಸಿದರು. ನಂತರ ಇತರ ಅಧಿಕಾರಿಗಳೊಂದಿಗೆ ಬೆರೆತರು, ನಗುತ್ತಾ “ಥಂಬ್ಸ್ ಅಪ್” ಸಂಜ್ಞೆ ಮಾಡಿದರು. ಪ್ರಸ್ತುತ ಜೋ ಬಿಡೆನ್ ಆರೋಗ್ಯವಾಗಿದ್ದಾರೆಂದು ವೈಟ್ ಹೌಸ್ ಸ್ಪಷ್ಟಪಡಿಸಿದೆ.
ಅಕಾಡೆಮಿಯ ಪದವೀಧರರ ಕುರಿತು ಮಾತನಾಡಿ ವೇದಿಕೆಯಿಂದ ನಿರ್ಗಮಿಸುವ ವೇಳೆ ಎಡವಿದ್ದಾಗಿ ತಿಳಿಸಿದರು. ಸುಮಾರು 90 ನಿಮಿಷಕ್ಕೂ ಹೆಚ್ಚು ಕಾಲ ನೂರಾರು ಪದವಿಧರರನ್ನು ಅಭಿನಂದಿಸಿ ಪ್ರಮಾಣ ಪತ್ರ ವಿತರಿಸಿದರು.
ಬಿಡೆನ್ ಅವರು ಈ ರೀತಿ ಅನೇಕ ಬಾರಿ ಎಡವಿ ಬಿದ್ದಿರುವ ಘಟನೆಗಳು ನಡೆದಿವೆ.