ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಇಡಿ ಸೇರಿದಂತೆ ಹಲವು ತನಿಖೆ ಎದುರಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪತ್ನಿ 14 ಸೈಟ್ ವಾಪಸಾತಿ ಮಾಡುತ್ತಿರೋದಾಗಿ ಮುಡಾ ಅಧ್ಯಕ್ಷ ಪತ್ರ ಬರೆದಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿರುವ ಸಿಟಿ ರವಿ ಆಡಿಕೆ ಕದ್ದಾಗ ಹೋದ ಮಾನ ಆನೆ ಕೊಟ್ಟರೂ ಬಾರದು ಎಂದಿದ್ದಾರೆ. ತಮ್ಮ ಸಾಮಾಜಿಕ ಜಾಲತಣದಲ್ಲಿ ಸಿಎಂ ಪತ್ನಿ ಸೈಟು ಹಿಂತಿರುಗಿಸಿರೋದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಟಿ ರವಿ ಅಡಿಕೆ ಕದ್ದಾಗ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬಂತೆ ಮುಡಾ ಹಗರಣದಲ್ಲಿ ನಿವೇಶನದಾರರಿಗೆ ಮಾಡಿದ ಮೋಸ ಸೈಟ್ ವಾಪಸು ಕೊಟ್ಟರೂ ಸರಿಯಾಗದು,ಕದ್ದ ಮಾಲು ವಾಪಸು ಕೊಡುವುದರಿಂದ ಕಳ್ಳತನದ ಆರೋಪ ಸುಳ್ಳಾಗುವುದೇ ಎಂದು ಪ್ರಶ್ನೆ ಮಾಡಿದ್ದಾರೆ. ಆರೋಪ ಬಂದ ದಿನದಂದು ಸೈಟ್ ವಾಪಸು ಕೊಟ್ಟಿದ್ದರೆ ಅದು ಪ್ರಾಮಾಣಿಕತೆ. ED ಯಲ್ಲಿ ನಿಮ್ಮ ವಿರುದ್ಧ ಕೇಸ್ ದಾಖಲಾಗಿದೆ ಎಂದಾಗ ಸೈಟ್ ಹಿಂದಕ್ಕೆ ಕೊಟ್ಟಿದ್ದು ತಪ್ಪು ಮಾಡಿ ಜೈಲು ಪಾಲಾಗುವ ಭಯದ ಕಾರಣಕ್ಕೆ ಹೊರತಾಗಿ ಬೇರೇನಲ್ಲ ಎಂದಿದ್ದಾರೆ.