ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮುಡಾ ಹಗರಣ ತನಿಖೆಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಅಷ್ಟೇ ಅಲ್ಲದೇ ಯಾವ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಬೇಕೆಂದು ಕೋರ್ಟ್ ಸೂಚನೆ ನೀಡಿದೆ. ಸಿಆರ್‌ಪಿಸಿ 156 (3) ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ರಿಂದ ಮೈಸೂರು ಎಸ್‌ಪಿಗೆ ಎಫ್‌ಐಆರ್ ದಾಖಲಿಸುವಂತೆ ಆದೇಶ ನೀಡಿದೆ. ಯಾವಯಾವ ಸೆಕ್ಷನ್ ದಾಖಲಾಗುತ್ತೆ ಅಂತ ನೋಡೋದಾದ್ರೆ. * IPC 120 B – ಅಪರಾಧಿಕ ಒಳಸಂಚು * 166 IPC – ಯಾವುದೇ ವ್ಯಕ್ತಿಗೆ ಹಾನಿ ಉಂಟು ಮಾಡುವ ಉದ್ದೇಶದಿಂದ ಸಾರ್ವಜನಿಕ ನೌಕರನು ಕಾನೂನುಬದ್ಧ ಆದೇಶ ಪಾಲಿಸದಿರುವುದು * 403 IPC – ಸ್ವತ್ತಿನ ಅಪ್ರಾಮಾಣಿಕ ದುರುಪಯೋಗ * 406 IPC – ಅಪರಾಧಿಕ ನಂಬಿಕೆದ್ರೋಹ * 420 IPC – ವಂಚನೆ ಮಾಡುವುದು ಮತ್ತು ಸ್ವತ್ತನ್ನು ನೀಡಲು ಅಪ್ರಾಮಾಣಿಕವಾಗಿ ಪ್ರೇರೇಪಿಸುವುದು * 426 IPC – ಕೇಡಿನ ಅಪರಾಧಕ್ಕಾಗಿ ದಂಡನೆ * 465 IPC – ಖೋಟಾ ತಯಾರಿಕೆಗೆ ದಂಡನೆ * 468 IPC – ವಂಚನೆಯ ಉದ್ದೇಶಕ್ಕಾಗಿ ಖೋಟಾ ತಯಾರಿಕೆ * 340 IPC – ಅಕ್ರಮ ಬಂಧನ * 351 IPC – ಹಲ್ಲೆ ಭಷ್ಟಾಚಾರ ನಿಯಂತ್ರಣ ಕಾಯ್ದೆ 1988 * 9 PC act – ಸಾರ್ವಜನಿಕ ಸೇವಕನ ಮೇಲೆ ಪ್ರಭಾವ ಬೀರುವ ಮೂಲಕ ಅನುಕೂಲತೆ ಸ್ವೀಕಾರದ ಅಪರಾಧದ ಬಗ್ಗೆ ತಿಳಿಸುತ್ತದೆ * 13 of PC Act – ಸಾರ್ವಜನಿಕ ಸೇವಕನಿಂದ ಕ್ರಮಿನಲ್ ದುರ್ನಡತೆಯ ಬಗ್ಗೆ ವ್ಯವಹರಿಸುತ್ತದೆ. * ಅಪ್ರಾಮಾಣಿಕವಾಗಿ ಅಥವಾ ಮೋಸದಿಂದ ಆಸ್ತಿಯನ್ನ ದುರುಪಯೋಗಪಡಿಸಿಕೊಂಡು ಅಥವಾ ಪರಿವರ್ತಿಸಿ ಇತರರಿಗೆ ವಹಿಸಿಕೊಟ್ಟ ಆಸ್ತಿಯನ್ನ ದುರುಪಯೋಗಪಡಿಸಿಕೊಳ್ಳಲು ಅಥವಾ ಪರಿವರ್ತಿಸಲು ಕಚೇರಿಯನ್ನ ಬಳಸಿಕೊಳ್ಳುವುದು ಬೇನಾಮಿ ಪ್ರಾಪರ್ಟಿ ಟ್ರಾನ್ಸಾಕ್ಷನ್ ಆ್ಯಕ್ಟ್ -1988 * sec 3 – ಬೇನಾಮಿ ವಹಿವಾಟುಗಳ ನಿಷೇಧ ಮತ್ತು ಪ್ರವೇಶಕ್ಕೆ ಶಿಕ್ಷೆ * sec 53 – ಬೇನಾಮಿ ದಂಡದ ಬಗ್ಗೆ ತಿಳಿಸುತ್ತದೆ * sec – 54 – ಸುಳ್ಳು ಮಾಹಿತಿ ನೀಡುವುದಕ್ಕೆ ದಂಡದ ಬಗ್ಗೆ ತಿಳಿಸುತ್ತದೆ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ – 2011 * sec – 3 – ಎಲ್ಲಾ ರೀತಿಯ ಭೂಕಬಳಿಕೆ ನಿಷೇಧ ಮತ್ತು ಕಾನೂನಬಾಹೀರ * sec – 4- ಯಾವುದೇ ವ್ಯಕ್ತಿ ಸ್ವತಃ ಅಥವಾ ಇನ್ನೊಬ್ಬ ವ್ಯಕ್ತಿಯ ಮೂಲಕ ಭೂ ಕಬಳಿಕೆ ಮಾಡುವಂತಿಲ್ಲ – ಕಾನೂನು ಬದ್ದ ಭೂ ಹಿಡುವಳಿದಾರರನ್ನ ಹೊರತುಪಡಿಸಿ ವಶಪಡಿಸಿಕೊಂಡ ಭೂಮಿಯನ್ನ ವಶಕ್ಕೆ ಪಡೆದುಕೊಂಡರೆ ಅದು ಅಪರಾಧ, ಈ ಸೆಕ್ಷನ್‌ಗಳ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸೋ ಸಾಧ್ಯತೆಯಿದೆ.