ರಾಮನಗರ: ಕಳೆದೆರಡು ದಿನಗಳ ಹಿಂದೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಿಂದ ಅಪಹರಣಕ್ಕೀಡಾಗಿರುವ ಮಾಜಿ ಸಚಿವ, ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಕಾರು ಚಾಮರಾಜನಗರ ಜಿಲ್ಲೆಯಲ್ಲಿ ಪತ್ತೆಯಾಗಿದೆ.
ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದ ಮಹದೇವಯ್ಯ ಅವರು ತಮ್ಮ ತೋಟದ ಮನೆಯಿಂದ ಮೂರು ದಿನಗಳ ಹಿಂದೆ ಬಿಳಿ ಬಣ್ಣದ ಕಾರು ಸಮೇತ ಕಾಣೆಯಾಗಿದ್ದರು. ಅವರನ್ನು ಯಾರೋ ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದು, ಅವರ ಕಾರು ಚಾಮರಾಜನಗರದಲ್ಲಿ ಪತ್ತೆಯಾಗಿದೆ.
ಮೊಬೈಲ್ ನಂಬರ್ ಟ್ರೇಸ್ ಮಾಡಿದಾದ ಮೊಬೈಲ್ ಲೊಕೇಶನ್ ಮಹದೇಶ್ವರ ಬೆಟ್ಟದ ಮೇಲೆ ತೋರಿಸುತ್ತಿತ್ತು ಇದರ ಜಾಡುಹಿಡಿದ ಪೊಲೀಸರು ಮಹದೇಶ್ವರ ಬೆಟ್ಟವನ್ನು ಪರಿಶೀಲನೆ ನಡೆಸಿದ್ದು ಆದರೆ ಅವರ ಪತ್ತೆ ಕಾರ್ಯ ಆಗಲಿಲ್ಲ ಎನ್ನಲಾಗಿದೆ.