ಸೊಳ್ಳೆಗಳನ್ನು ಓಡಿಸುವ 5 ಬಗೆಯ ಗಿಡಗಳು

ಕೆಲವೊಮ್ಮೆ ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಸೊಳ್ಳೆಗಳು ಮಾತ್ರ ಮನೆಯ ಮೂಲೆ-ಮೂಲೆಯಲ್ಲಿಯೂ ಹರಿದಾಡುತ್ತಲೇ ಇರುತ್ತದೆ. ಅದರಲ್ಲಿಯೂ ರಾತ್ರಿ ಹೊತ್ತು ಇವುಗಳ ಕಾಟ ತಡೆಯಲು ಆಗುವುದಿಲ್ಲ. ಮಳೆಗಾಲವೆಂದರೆ ಸೊಳ್ಳೆಗಳ ಕಾಲವೆಂಬ ಭಾವನೆ ಬಂದರೆ ಅಚ್ಚರಿಯಿಲ್ಲ. ಬರೀ ಸೊಳ್ಳೆ ಕಚ್ಚುವುದು ಸಮಸ್ಯೆಯಲ್ಲ, ಅದರೊಂದಿಗೆ ಬರುವ ವೈರಸ್‌ಗಳು ಭೀತಿ ಮೂಡಿಸುತ್ತಿವೆ. ಸೊಳ್ಳೆಗಳ ಹಾವಳಿ ಈಗಂತೂ ಹೆಚ್ಚೇ. ಇವುಗಳಿಂದ ಕಾಡುವ ಕಾಯಿಲೆ ಒಂದೆರಡಲ್ಲ. ಈ ಕಾರಣಕ್ಕಾಗಿಯೇ ಬಹಳಷ್ಟು ಮಂದಿ ಮಸ್ಕಿಟೋ ಕಾಯಿಲ್, ರಿಪೆಲ್ಲೆಂಟ್‌ಗಳನ್ನು ಬಳಸುತ್ತಾರೆ. ಅವುಗಳ ವಾಸನೆ ಕೂಡ ಆರೋಗ್ಯಕ್ಕೆ ಹಾನಿಕರ.ಅದರ ಬದಲು ಈ ಗಿಡಗಳನ್ನು ಮನೆಯಲ್ಲಿ ಬೆಳೆಸಿಕೊಂಡರೆ ಸೊಳ್ಳೆಗಳನ್ನು ಓಡಿಸಬಹುದು. ಯಾಕೆಂದರೆ ಈ ಗಿಡಗಳು ಬಿಡುವ ಹೂಗಳು ಮನೆಯೊಳಗೆ ಸೊಳ್ಳೆಗಳು ಬರದಂತೆ ತಡೆಯುತ್ತವೆ ಸೊಳ್ಳೆಗಳು ಹತ್ತಿರ ಬಾರದಂತೆ ಕಾಪಾಡಿಕೊಳ್ಳಬಹುದು. ಜೊತೆಗೆ, ಮನೆಯ ಸುತ್ತಮುತ್ತ ಕೆಲವು ಒಳಾಂಗಣ/ಹೊರಾಂಗಣದ ಗಿಡಗಳನ್ನು ಬೆಳೆಸುವುದು ಸಹ ಈ ಕೆಲಸದಲ್ಲಿ ಉಪಯೋಗಕ್ಕೆ ಬರುತ್ತದೆ. ಸೊಳ್ಳೆಗಳನ್ನು ದೂರ ಓಡಿಸುವಂಥ ಗುಣವನ್ನುಳ್ಳ ಐದು ಗಿಡಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಮಾರಿಗೋಲ್ಡ್‌ ಚೆಂಡು ಹೂವು ಎಂದೇ ಇವು ಪ್ರಸಿದ್ಧ. ಮಳೆಗಾಲದ ಈ ಹೊತ್ತಿನಲ್ಲಿ ಮೇಲೇಳುವ ಚೆಂಡು ಹೂವಿನ ಗಿಡಗಳು ಸೊಳ್ಳೆಗಳು ತಡೆಯಲಾಗದಷ್ಟು ವಾಸನೆಯನ್ನು ಹೊಂದಿರುತ್ತದೆ. ಹಾಗಾಗಿ ಇದನ್ನು ನೀವು ಮನೆಯ ಆವರಣದಲ್ಲಿ ನೆಡಬಹುದು. ಈ ಗಿಡ ಸೊಳ್ಳೆಗಳಷ್ಟೇ ಅಲ್ಲದೇ ಇರುವೆಗಳೂ ಮನೆಯೊಳಗೆ ಬರದಂತೆ ತಡೆಯುತ್ತದೆ.

ಲಾವೆಂಡರ್ ಸೊಳ್ಳೆಗಳನ್ನು ಓಡಿಸುವ ನಿಟ್ಟಿನಲ್ಲಿ ಲ್ಯಾವೆಂಡರ್‌ ಒಂದು ಚಮತ್ಕಾರಿಕ ಸಸ್ಯವಾಗಿದೆ. ಈ ಗಿಡದ ಬೆಳವಣಿಗೆಗೆ ಅಂತಹ ಆರೈಕೆಯ ಅಗತ್ಯವೇನೂ ಇಲ್ಲದಿರುವುದರಿಂದ ಇದನ್ನು ಬೆಳೆಸುವುದು ಸುಲಭ. -ಇದು ಸುಮಾರು ನಾಲ್ಕು ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲದು. ಸೂರ್ಯನ ಬೆಳಕು ಇದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೇಕಾಗುತ್ತದೆ. -ರಾಸಾಯನಿಕಗಳಿಂದ ಮುಕ್ತವಾಗಿರುವ ಸೊಳ್ಳೆ ನಿವಾರಕ ದ್ರಾವಣವನ್ನು ಇದರಿಂದ ಪಡೆಯಬಹುದು. ಲ್ಯಾವೆಂಡರ್‌ ಸಸಿಯಿಂದ ಪಡೆದ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಅದನ್ನು ನೇರವಾಗಿ ತ್ವಚೆಯ ಮೇಲೆ ಲೇಪಿಸಿಕೊಳ್ಳಬಹುದು. -ಸೊಳ್ಳೆಗಳನ್ನು ದೂರವಿರಿಸಲು, ಲ್ಯಾವೆಂಡರ್‌ ಸಸಿಯಿಂದ ಪಡೆದ ಎಣ್ಣೆಯನ್ನು ಕುತ್ತಿಗೆ, ಮೊಣಕೈಗಳು ಹಾಗೂ ಕಾಲುಗಳ ಗಂಟುಗಳ ಮೇಲೆ ಹಚ್ಚಿಕೊಳ್ಳಬಹುದು. – ಸೊಳ್ಳೆಗಳನ್ನು ನಿವಾರಿಸುವುದಕ್ಕಾಗಿ ಲ್ಯಾವೆಂಡರ್‌ ಗಿಡಗಳ ಕುಂಡಗಳನ್ನು ನೀವು ಕುಳಿತುಕೊಳ್ಳುವ ಸ್ಥಳಗಳಲ್ಲಿಯೇ ಇರಿಸಬಹುದು.

ಲೆಮೆನ್‌ ಬಾಮ್‌ ಪುದೀನಾ ಜಾತಿಗೆ ಸೇರಿದ ಸಸ್ಯವಿದು. ಇದರ ಕಟುವಾದ ಘಮ ಸೊಳ್ಳೆ ಓಡಿಸುವಲ್ಲಿ ನೆರವಾಗುತ್ತದೆ. ಯಾವುದೇ ಕೈತೋಟ ಅಥವಾ ಬಾಲ್ಕನಿಗಳಲ್ಲಿ ಇವುಗಳನ್ನು ಸುಲಭವಾಗಿ ಬೆಳೆಯಬಹುದು. ಇದರ ಗಾಢವಾದ ನಿಂಬೆಯಂಥ ಪರಿಮಳ ನಮಗೆ ಹಿತವೆನಿಸಿದರೂ ಸೊಳ್ಳೆಗಳಿಗೆ ಆಗದು. ಮನಸ್ಸನ್ನು ಶಾಂತಗೊಳಿಸುವ ಗುಣಗಳು ಇದಕ್ಕಿರುವುದರಿಂದ, ಈ ಮೂಲಿಕೆಯ ಎಲೆಗಳನ್ನು ಚಹಾ ಮಾಡಿ ಕುಡಿಯುವವರಿದ್ದಾರೆ.

Advertisement

ಸಿಟ್ರೋನೆಲ್ಲ ಲೆಮೆನ್‌ಗ್ರಾಸ್‌, ನಿಂಬೆ ಹುಲ್ಲು ಎಂದೆಲ್ಲಾ ಈ ಗಿಡವನ್ನು/ಹುಲ್ಲನ್ನು ಕರೆಯಲಾಗುತ್ತದೆ. ಸೊಳ್ಳೆಗಳನ್ನು ನಿಯ೦ತ್ರಿಸುವಲ್ಲಿ ಸಿಟ್ರೋನೆಲ್ಲ ಹುಲ್ಲು ಅತ್ಯುತ್ತಮವಾದ ಸಸ್ಯವಾಗಿದೆ. ಇದು ಸರಿಸುಮಾರು ಎರಡು ಮೀಟರ್ ಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ ಹಾಗೂ ವರ್ಷಕ್ಕೊಮ್ಮೆ ಲ್ಯಾವೆ೦ಡರ್ ಬಣ್ಣದ ಹೂಗಳನ್ನು ಅರಳಿಸುತ್ತದೆ. ಈ ಹುಲ್ಲಿನಿ೦ದ ಪಡೆಯಲಾಗುವ ಸಿಟ್ರೋನೆಲ್ಲ ತೈಲವನ್ನು ಮೇಣದ ಬತ್ತಿ, ಸುಗ೦ಧದ್ರವ್ಯ, ಹಾಗೂ ಮತ್ತಿತರ ಗಿಡಮೂಲಿಕೆಗಳ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಡೆ೦ಗ್ಯೂ ಜ್ವರಕ್ಕೆ ಕಾರಣೀಭೂತವಾದ ಸೊಳ್ಳೆಯನ್ನು (Aedes Aegypti) ಪರಿಣಾಮಕಾರಿಯಾಗಿ ನಿಯ೦ತ್ರಿಸಲೂ ಕೂಡ ಸಿಟ್ರೋನೆಲ್ಲ ಹುಲ್ಲನ್ನು ಬಳಸುತ್ತಾರೆ. ಸೊಳ್ಳೆಗಳನ್ನು ನಿಯ೦ತ್ರಿಸಲು ಸಿಟ್ರೋನೆಲ್ಲ ಎಣ್ಣೆಯನ್ನು ಮೇಣದಬತ್ತಿ ಹಾಗೂ ಲಾನ್ ಟನ್೯ ಗಳಿಗೆ ಸೇರಿಸಿ ಅವುಗಳನ್ನು ನಿಮ್ಮ ಮನೆಯ೦ಗಳದಲ್ಲಿ ಉರಿಸಬಹುದು. ಸಿಟ್ರೋನೆಲ್ಲ ಹುಲ್ಲು ಫ೦ಗಸ್ ಪ್ರತಿಬ೦ಧಕ ಗುಣಲಕ್ಷಣಗಳನ್ನೂ ಸಹ ಹೊ೦ದಿದೆ. ಸಿಟ್ರೋನೆಲ್ಲ ತೈಲವು ತ್ವಚೆಗೂ ಕೂಡ ಸುರಕ್ಷಿತವಾಗಿದ್ದು, ಅದನ್ನು ನೀವು ದೀರ್ಘಕಾಲದವರೆಗೆ ಹಚ್ಚಿಕೊ೦ಡಿರಬಹುದು. ತ್ವಚೆಯ ಜೀವಕೋಶಗಳಿಗೆ ಅದು ಏನೊ೦ದು ಹಾನಿಯನ್ನೂ ಉ೦ಟುಮಾಡುವುದಿಲ್ಲ. ಆದರೆ ಈ ಹುಲ್ಲಿನ ಅಂಚು ಹರಿತವಾಗಿರುವುದರಿಂದ, ನೇರವಾಗಿ ಕೈ-ಕಾಲುಗಳ ಮೇಲೆ ಉಜ್ಜಿಕೊಳ್ಳಲು ಯತ್ನಿಸಬೇಡಿ, ಗಾಯವಾದೀತು.

ಬೆಸಿಲ್ ಇದು ಕೇವಲ ಸೊಳ್ಳೆ ಓಡಿಸುವುದಕ್ಕೆ ಮಾತ್ರವಲ್ಲ, ರುಚಿಕಟ್ಟಾದ ಅಡುಗೆಗೂ ಉಪಯೋಗವಾಗುತ್ತದೆ. ಇದರ ತೀಕ್ಷ್ಣವಾದ ಪರಿಮಳವು ಸೊಳ್ಳೆಗಳನ್ನು ಹತ್ತಿರ ಸುಳಿಯಗೊಡುವುದಿಲ್ಲ. ಹಾಗಾಗಿ ಸೊಳ್ಳೆ ಓಡಿಸುವ ಉಪಾಯಗಳಲ್ಲಿ ಇದನ್ನು ಸಹ ಅಳವಡಿಸಿಕೊಳ್ಳಬಹುದು. ಸಾಕಷ್ಟು ಗಾಳಿ-ಬೆಳಕು ಇರುವಂಥ ಜಾಗದಲ್ಲಿ ಇದನ್ನು ಕುಂಡಗಳಲ್ಲಿ ಬೆಳೆಸಬಹುದು. ಇದರ ಎಲೆಗಳನ್ನು ಕಿವುಚಿ ಮೈ-ಕೈಗೆಲ್ಲ ರಸ ಲೇಪಿಸಿಕೊಂಡರೂ ಸೊಳ್ಳೆ ಹತ್ತಿರ ಸುಳಿಯುವುದಿಲ್ಲ. ಇದರ ಕುಂಡಗಳನ್ನು ಸೊಳ್ಳೆಯ ಪ್ರವೇಶ ದ್ವಾರಗಳಲ್ಲಿ ಇರಿಸಿಕೊಂಡರೆ, ಸೊಳ್ಳೆಯ ಉಪಟಳಕ್ಕೆ ಬಾಗಿಲು ತೆರೆಯಲೂ ಅಳುಕುವ ಸ್ಥಿತಿ ತೊಲಗುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement