ಬೆಂಗಳೂರು: ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಹೇರ್ ಸ್ಟೈಲ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆಯಾಗುತ್ತಿತ್ತು. ಅವರ ಹೇರ್ ಸ್ಟೈಲ್ ಸಖತ್ ವೈರಲ್ ಆಗುತಿತ್ತು. ಪ್ರತಾಪ್ ಸಿಂಹ ತಮ್ಮ ಹೇರ್ ಸ್ಟೈಲ್ ಚೆಂಜ್ ಮಾಡಿದ್ರ ಬಗ್ಗೆ ವಿಚಿತ್ರ ವಿಚಿತ್ರ ಕಾಮೆಂಟ್ ಗಳು ಬಂದಿದ್ವು, ಕೆಲವರು ಬಿಗ್ ಬಾಸ್‌ಗೆ ಹೋಗೋಕೆ ಹೇರ್ ಸ್ಟೈಲ್ ಚೆಂಜ್ ಮಾಡಿದ್ರಾ ಅಥಾವ ಯಾವುದಾದರೂ ಸಿನಿಮಾಗೋಸ್ಕರ ಹೇರ್ ಸ್ಟೈಲ್ ಚೆಂಜ್ ಮಾಡಿದ್ರಾ ಅಥವಾ ಟಿಕೆಟ್ ಸಿಗದಿರೋದಕ್ಕೆ ನೊಂದು ಹೀಗೆ ಹೇರ್ ಸ್ಟೈಲ್ ಚೆಂಜ್ ಮಾಡಿದ್ರಾ ಎಂದೆಲ್ಲ ಕಾಮೆಂಟ್‌ಗಳನ್ನು ಮಾಡಿದ್ರು. ಇದೀಗ ತಮ್ಮ ಹೊಸ ಹೇರ್ ಸ್ಟೈಲ್‌ಗೆ ಗುಡ್ ಬೈ ಹೇಳಿ ಹಳೇ ಹೇರ್ ಸ್ಟೈಲ್‌ಗೆ ಪ್ರತಾಪ್ ಸಿಂಹ ಮರಳಿದ್ದಾರೆ. ಇದರ ಬಗ್ಗೆ ತಮ್ಮ ಫೇಸ್‌ಬುಕ್ ನಲ್ಲಿ ಹಾಕಿರುವ ಪ್ರತಾಪ್ ಸಿಂಹ, ಕೇಂದ್ರ ಸಚಿವರು ಹಾಗೂ ಹಿರಿಯಣ್ಣನಂತೆ ನನ್ನನ್ನು ಸಲುಹುವ ವಿ ಸೋಮಣ್ಣ ಸಾಹೇಬರ ಗದರಿಕೆಗೆ ಅಂಜಿ ಹೇರ್ ಕಟ್ ಮಾಡಿಸಿದ್ದೇನೆ ಮತ್ತು ನಿಮ್ಮ ಬೈಗುಳದಿಂದಲೂ ತಪ್ಪಿಸಿಕೊಳ್ಳುತಿದ್ದೇನೆ ಎಂದು ಹೇರ್ ಕಟ್ ಮಾಡಿಸಿರುವ ಫೋಟೋ ಹಾಕಿದ್ದಾರೆ.
