Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

‘ಸ್ಟಾರ್‌ ಚಿಹ್ನೆಯಿರುವ ನೋಟುಗಳಿಗೂ ಮಾನ್ಯತೆ ಇದೆ, ಗೊಂದಲ ಬೇಡ’ – ಆರ್‌ಬಿಐ ಸ್ಪಷ್ಟನೆ

0

ನವದೆಹಲಿ: ಸ್ಟಾರ್‌(*) ಚಿಹ್ನೆ ಇರುವ ನೋಟುಗಳು ಇತರೆ ನೋಟುಗಳಂತೆಯೇ ಮಾನ್ಯವಾಗಿರುತ್ತದೆ, ಹಾಗಾಗಿ ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸ್ಪಷ್ಟನೆ ನೀಡಿದೆ.

ಕರೆನ್ಸಿ ನೋಟುಗಳಲ್ಲಿ ಸ್ಟಾರ್‌ ಚಿಹ್ನೆಯನ್ನು ಹೊಂದಿವೆ ಎಂಬುದನ್ನು ಆರ್‌ಬಿಐ ಸ್ಪಷ್ಟಪಡಿಸಿದ್ದು, ಈ ಚಿಹ್ನೆ ಇರುವ ಕರೆನ್ಸಿ ನೋಟುಗಳು ಇತರ ಕರೆನ್ಸಿ ನೋಟುಗಳಂತೆ ಮಾನ್ಯವಾಗಿರುತ್ತವೆ ಎಂದು ಸ್ಪಷ್ಟಪಡಿಸಿದೆ.

ಇನ್ನು ಈ ಚಿಹ್ನೆಯಿರುವಂಥ ನೋಟುಗಳು ಮಾನ್ಯವಲ್ಲ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾದ ಹಿನ್ನೆಲೆಯಲ್ಲಿ ಈ ರೀತಿ ಸ್ಪಷ್ಟನೆ ನೀಡಿರುವ ಆರ್‌ಬಿಐ, ದೋಷಪೂರಿತವಾಗಿ ಮುದ್ರಣಗೊಂಡ ನೋಟುಗಳ ಬದಲಿಗೆ ಬಳಸಲಾದ ಬ್ಯಾಂಕ್‌ ನೋಟುಗಳ ನಂಬರ್‌ ಪ್ಯಾನೆಲ್‌ನಲ್ಲಿ ಸ್ಟಾರ್‌ ಚಿಹ್ನೆಯನ್ನು ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ನಂಬರ್‌ ಪ್ಯಾನೆಲ್‌ನಲ್ಲಿ ಈ ಚಿಹ್ನೆಯಿರುವ ನೋಟುಗಳು ಮಾನ್ಯವಾಗಿರುತ್ತದೆಎಂದು ಹೇಳಿದೆ.

Leave A Reply

Your email address will not be published.