ಹಾಲು ಅಗತ್ಯ ಪೋಷಕಾಂಶಗಳು ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದು ನಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ವೈದ್ಯರು ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಪ್ರತಿದಿನ ಹಾಲು ಕುಡಿಯಲು ಸಲಹೆ ನೀಡುತ್ತಾರೆ. ಆದರೆ ಹಾಲಿನ ಜೊತೆಗೆ ಕೆಲವು ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳನ್ನು ಹಾಲಿನ ಜೊತೆಗೆ ತಿಂದರೆ ಎಲ್ಲಿಲ್ಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ತಜ್ಞರು ಹೇಳಿದ್ದಾರೆ. ಹಾಗಿದ್ದರೆ ಯಾವ ಆಹಾರ ಪದಾರ್ಥವನ್ನು ಹಾಲಿನೊಂದಿಗೆ ಬೆರೆಸಬಾರದು ಎಂಬುವುದಕ್ಕೆ ಇಲ್ಲಿದೆ ಉತ್ತರ. ಕೆಲವರು ಬೆಳಗಿನ ಉಪಾಹಾರಕ್ಕೆ ಮೂಲಂಗಿಗೆ ಸಂಬಂಧಿಸಿದ ಅನೇಕ ಪದಾರ್ಥಗಳನ್ನು ಸೇವಿಸುತ್ತಾರೆ. ಆದರೆ ಮೂಲಂಗಿ ಸೇವಿಸಿದ ಕೂಡಲೆ ಹಾಲು ಕುಡಿಯಬಾರದು. ಈ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುವುದು ವೈದ್ಯರ ಅಭಿಪ್ರಾಯ. ಇದರಿಂದ ಚರ್ಮ ರೋಗಗಳ ಅಪಾಯ ಹೆಚ್ಚಾಗುತ್ತದೆ. ಹೀಗಾಗಿ ಮೂಲಂಗಿ ಸೇವನೆಯ 2 ಗಂಟೆಗಳ ನಂತರ ಹಾಲು ಕುಡಿಯಲು ಸೂಚಿಸಲಾಗುತ್ತದೆ. ಹಾಲಿನ ಜೊತೆಗೆ ಬೇಳೆಕಾಳುಗಳನ್ನು ತೆಗೆದುಕೊಳ್ಳಬೇಡಿ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಆಹಾರದ ಭಾಗವಾಗಿ ಮೊಳಕೆ ಕಾಳುಗಳನ್ನು ಸೇವಿಸಿದ ನಂತರ ಹಾಲು ಕುಡಿಯುತ್ತಾರೆ. ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ಹಾನಿಕರ. ಹಾಲಿನ ಜೊತೆಗೆ ಮೊಳಕೆ ಬರಿಸಿದ ಕಾಳು ತಿಂದರೆ ಹೃದಯಾಘಾತವಾಗುವ ಅಪಾಯವಿದೆ. ನೈಸರ್ಗಿಕವಾಗಿ ಉಪ್ಪು ಇಲ್ಲದೆ ಯಾವುದೇ ಪಾಕ ವಿಧಾನವಿಲ್ಲ. ಅಡುಗೆಯಲ್ಲಿ ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ ಉಪ್ಪು ಮತ್ತು ಹಾಲು ಮಿಶ್ರಣ ಮಾಡಬಾರದು. ಬೆಳಗಿನ ಉಪಾಹಾರದ ನಂತರವೂ, ರಾತ್ರಿ ಊಟವಾದ ತಕ್ಷಣ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆಯುರ್ವೇದದ ಪ್ರಕಾರ ಹೀಗೆ ಮಾಡುವುದರಿಂದ ತ್ವಚೆಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು. ಅದಕ್ಕಾಗಿಯೇ ಉಪಹಾರ ಅಥವಾ ಊಟದ ನಂತರ ಸ್ವಲ್ಪ ಸಮಯ ಬಿಟ್ಟು ಹಾಲು ಕುಡಿಯಿರಿ. ಹುಳಿ ಹಣ್ಣುಗಳಾದ ಕಿತ್ತಳೆ, ನಿಂಬೆ, ದ್ರಾಕ್ಷಿ, ಹುಣಸೆಹಣ್ಣು, ನೆಲ್ಲಿಕಾಯಿ ಮತ್ತು ಸೇಬುಗಳನ್ನು ಹಾಲಿನೊಂದಿಗೆ ತಿನ್ನಬಾರದು. ಇದರಿಂದ ಹಾಲು ವಿಷಕಾರಿಯಾಗಬಹುದು. ಅಲ್ಲದೆ ಬಾಳೆಹಣ್ಣಿನ ಜೊತೆಗೆ ಹಾಲನ್ನು ತೆಗೆದುಕೊಳ್ಳಬೇಡಿ. ಹಾಲು ಮತ್ತು ಬಾಳೆಹಣ್ಣನ್ನು ಒಟ್ಟಿಗೆ ಸೇವಿಸುವುದರಿಂದ ಕಫ ಸಮಸ್ಯೆ ಉಂಟಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಚೆರ್ರಿ, ಯೀಸ್ಟ್ ಹೊಂದಿರುವ ಆಹಾರಗಳು, ಮೊಟ್ಟೆ, ಮಾಂಸ, ಮೀನು, ಕೆಚಪ್, ಮೊಸರು ಮತ್ತು ಬೀನ್ಸ್ ಅನ್ನು ಹಾಲಿನೊಂದಿಗೆ ತಿನ್ನಬಾರದು. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಹಾಲಿಗೆ ಜೇನುತುಪ್ಪ, ಬೆಲ್ಲ ಮತ್ತು ಸಕ್ಕರೆಯನ್ನು ಮಾತ್ರ ಬೆರೆಸಬೇಕು ಮತ್ತು ಉಳಿದವುಗಳನ್ನು ಹಾಲಿನೊಂದಿಗೆ ಬೆರೆಸಬಾರದು ಎಂದು ಹೇಳಲಾಗುತ್ತದೆ.