ಹುಬ್ಬಳ್ಳಿ : ಅಂಜಲಿ ಕೊಲೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್ ಗಿರೀಶ ನನ್ನು ಸಿಐಡಿ ಅಧಿಕಾರಿಗಳು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿನ ಅಂಜಲಿ ಮನೆಗೆ ಕರೆತಂದು ಸ್ಥಳ ಮಹಜರು ಮಾಡಿದರು.
9 ಜನ ಸಿಐಡಿ ಅಧಿಕಾರಿಗಳು ಆರೋಪಿಯನ್ನು ಬಿಗಿ ಭದ್ರತೆಯ ನಡುವೆ ಕರೆ ತಂದು ಸ್ಥಳ ಮಹಜರು ಮಾಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಕೊಲೆ ಮಾಡುವ ಸಂದರ್ಭದಲ್ಲಿ ವಿಶ್ವ ಎಲ್ಲಿಂದ ಬಂದಿದ್ದ ಎಲ್ಲಿ ಆಟೋ ನಿಲ್ಲಿಸಿ ಅಂಜಲಿ ಮನೆಗೆ ಬಂದ ಎಂಬುದನ್ನು ಮಹಜರು ಮಾಡಲಾಯಿತು.
ಈ ಸಂದರ್ಭದಲ್ಲಿ ಕೊಲೆಗಾರ ವಿಶ್ವನನ್ನು ನೋಡಲು ಏರಿಯಾದ ಜನರು ಗುಂಪು ಗುಂಪಾಗಿ ಬಂದಿದ್ದರು. ಸಿಐಡಿ ಅಧಿಕಾರಿಗಳು ಸ್ಥಳ ಮಹಜರು ಮಾಡಿ ಆತನನ್ನು ಮೈಸೂರಿಗೆ ಕರೆದೊಯ್ಯಲ್ಲಿದ್ದಾರೆ.