ಸಿಂಧನೂರು; ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಇದಕ್ಕೆ ಬದಲಾದ ಜೀವನ ಶೈಲಿಯೇ ಕಾರಣ ಎಂಬುದು ವೈದ್ಯರ ಅಭಿಮತ.
ಇದೀಗ ಯುವ ವೈದ್ಯರೊಬ್ಬರು ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಅಕ್ಕಮಹಾದೇವಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 34 ವರ್ಷದ ಜನರಲ್ ಸರ್ಜನ್ ಡಾ. ಚಂದ್ರಶೇಖರ ಮಾದಿನೂರು ಅಕಾಲಿಕ ಸಾವಿಗೆ ತುತ್ತಾಗಿದ್ದಾರೆ. ಆಸ್ಪತ್ರೆಯ ಮೆಟ್ಟಿಲಿನಲ್ಲೇ ಅವರು
ಕೊನೆಯುಸಿರೆಳೆದಿದ್ದಾರೆ.


































