ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು. ಅಂಜಲಿ ಹತ್ಯೆಯ ಹಿಂದೆ ಪೋಕ್ಸೋ ಆರೋಪಿಯ ಕೈವಾಡದ ಶಂಕೆ ಇರುವುದು ಪತ್ತೆಯಾಗಿದೆ. ನೇಹಾ ಹತ್ಯೆಯಿಂದ ನೊಂದಿದ್ದ ಹುಬ್ಬಳ್ಳಿ ಜನರಿಗೆ ಅಂಜಲಿ ಹತ್ಯೆ ಮತ್ತೊಂದು ಆಘಾತ ನೀಡಿತ್ತು. ಅಂಜಲಿ ಕೊಂದ ಆರೋಪಿ ಗಿರೀಶ್ ಕಂಬಿ ಹಿಂದೆ ಬಂಧಿಯಾಗಿದ್ದಾನೆ. ಆದರೆ ಇದೀಗ ಈ ಕೇಸ್ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ವಿಜಯ್ ಹಿರೇಮಠ ಎಂಬ ಪೋಕ್ಸೋ ಆರೋಪಿ ಕೊಲೆಗಾರ ಗಿರೀಶ್ಗೆ ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆ ಆರೋಪಿ ಗಿರೀಶ್ ಅಲಿಯಾಸ್ ವಿಶ್ವನ ಜೊತೆ ವಿಜಯ್ ಹಿರೇಮಠ ನಿರಂತರವಾಗಿ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ವಿಜಯ ಕೈವಾಡವೂ ಇದೆಯೋ ಅನ್ನೋ ಅನುಮಾನ ಶುರುವಾಗಿದೆ.. ಅಂಜಲಿ ಹತ್ಯೆಗೆ ಈ ವಿಜಯ್ ಹಿರೇಮಠ ಕುಮ್ಮುಕ್ಕು ನೀಡಿದ್ದಾನೋ ಅನ್ನೋ ಶಂಕೆ ಪೊಲೀಸರಿಗೆ ಕಾಡತೊಡಗಿದೆ. ಈ ವಿಜಯ್ ಹಿರೇಮಠ್ ವಿರುದ್ಧ 2022 ಫೆಬ್ರುವರಿ 16ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. . ಕೇಸ್ಗೆ ಸಂಬಂಧಿಸಿಂದಂತೆ ವಿಜಯ್ನನ್ನ ಪೊಲೀಸರು ಬಂಧಸಿದ್ದರು. ಸದ್ಯ ಈ ಪ್ರಕರಣ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿದೆ. ಈ ಮಧ್ಯೆ ವಿಜಯ್ ಮೇಲೆ ಅಂಜಲಿ ಹತ್ಯೆಗೆ ಸಹಾಯ ಮಾಡಿರುವ ಆರೋಪವೂ ಕೇಳಿ ಬಂದಿದೆ. ಮೈಸೂರಿನಿಂದ ನಸುಕಿನ ಜಾವ ಹುಬ್ಬಳಿಗೆ ಬಂದಿದ್ದ ಗಿರೀಶ್ ಅಂಜಲಿ ಜೀವ ತೆಗೆದು ಪರಾರಿಯಾಗಿದ್ದ. ಆದರೆ, ಅಂಜಲಿ ಹತ್ಯೆಯಾದ ದಿನದವರೆಗೂ ವಿಜಯ್ ಹಿರೇಮಠ ಗಿರೀಶ್ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಆದರೆ, ಅಂಜಲಿ ಕೊಲೆಯಾದ ಬಳಿಕ ವಿಜಯ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಹೀಗಾಗಿ ಗಿರೀಶ್ಗೆ ವಿಜಯ್ ಸಹಾಯ ಮಾಡಿರುವ ಅನುಮಾನವಿದೆ. ಮೃತ ಅಂಜಲಿ ಸಹೋದರಿ ಯಶೋದ ವಿಜಯ್ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಅಕ್ಕನ ಹತ್ಯೆ ಹಿಂದೆ ವಿಜಯ್ ಕೈವಾಡವಿದೆ ಅಂತ ಆರೋಪ ಮಾಡಿದ್ದಾರೆ. ಹೀಗಾಗಿ ನಾಪತ್ತೆಯಾದ ಅಜಯ್ನ ಪತ್ತೆ ಹಚ್ಚುವಂತೆ ದಲಿತ ಸಂಘಟನೆ ಆಗ್ರಹಿಸಿದ್ದು, ಸಿಐಡಿ ಡಿಜಿಜಿ ಡಾ.ಎಂ.ಎ ಸಲೀಂ ಅವರಿಗೆ ಮನವಿ ಸಲ್ಲಿಸಿದೆ. , ಈ ವಿಜಯ್ ಅಂಜಲಿ ಹತ್ಯೆಗೆ ಸಹಾಯ ಮಾಡಿದ್ನಾ? ಗಿರೀಶ್ಗೆ ಕುಮ್ಮಕ್ಕು ನೀಡಿದ್ನಾ ಅನ್ನೋದು ತನಿಖೆ ಬಳಿಕವಷ್ಟೆ ಗೊತ್ತಾಗಲಿದೆ.
