ಉತ್ತರಕಾಶಿ: ಉತ್ತರಾಖಂಡದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದ್ದು, ಸುರಂಗ ಮಾರ್ಗದ ಬಳಿ 41 ಆಂಬುಲೆನ್ಸ್ ಸಾಲಾಗಿ ಬಂದು ನಿಂತಿದೆ.
ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಇಂದು ಮಧ್ಯಾಹ್ನದ ವೇಳೆಗೆ ಡ್ರಿಲ್ಲಿಂಗ್ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಕಾರ್ಮಿಕರನ್ನು ಹೊರ ತೆಗೆಯುವ ಕಾರ್ಯವಷ್ಟೇ ಬಾಕಿ ಉಳಿದಿರುವುದಾಗಿ ತಿಳಿಸಿದ್ದಾರೆ.
ಇನ್ನು ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಲು ಸಿಲ್ಕ್ಯಾರಾ ಸುರಂಗ ಮಾರ್ಗದ ಬಳಿ 41 ಆಂಬುಲೆನ್ಸ್ ಸಾಲಾಗಿ ನಿಂತಿರುವ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿದೆ