ನವದೆಹಲಿ : ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ವಿವಾದ ನಿಲ್ಲುತ್ತಿಲ್ಲ. ಇದರ ಮಧ್ಯೆಯೇ ಒಟ್ಟಾವಾ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ಹೆಚ್ಚಿನ ರಾಜತಾಂತ್ರಿಕರನ್ನು ಕೌಲಾಲಂಪುರ್ ಅಥವಾ ಸಿಂಗಾಪುರಕ್ಕೆ ಸ್ಥಳಾಂತರಿಸಿದೆ. ಇದಕ್ಕೂ ಮೊದಲು ಭಾರತವು ತನ್ನ ರಾಜತಾಂತ್ರಿಕರ ಸಂಖ್ಯೆಯನ್ನು ಕಡಿಮೆ ಮಾಡಲು ಒಟ್ಟಾವಾಗೆ ಅಕ್ಟೋಬರ್ 10ರ ಗಡುವನ್ನು ನೀಡಿತ್ತು. ಭಾರತ ಸರ್ಕಾರವು ತನ್ನ ದೇಶದಲ್ಲಿನ ಕೆನಡಾ ರಾಜತಾಂತ್ರಿಕ ಸಿಬ್ಬಂದಿಯ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಅಕ್ಟೋಬರ್ 10ರವರೆಗೆ ಕೆನಡಾಕ್ಕೆ ಸಮಯ ನೀಡಿತ್ತು. ಅದರಂತೆ 41 ರಾಜತಾಂತ್ರಿಕರನ್ನು ಸ್ಥಳಾಂತರಿಸಲಾಗಿದೆ. ದೆಹಲಿಯ ಹೊರಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ಕೆನಡಾದ ರಾಜತಾಂತ್ರಿಕರನ್ನು ಕೌಲಾಲಂಪುರ ಅಥವಾ ಸಿಂಗಾಪುರಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿ ಹೇಳಿದೆ. ಕೆನಡಾದ ರಾಜತಾಂತ್ರಿಕ ಮತ್ತು ಕಾನ್ಸುಲರ್ ಸಂಬಂಧಗಳನ್ನು ನಿರ್ವಹಿಸುವ ವಿಭಾಗವಾದ ಗ್ಲೋಬಲ್ ಅಫೇರ್ಸ್ ಕೆನಡಾ, ಈ ಹಿಂದೆ ತನ್ನ ಕೆಲವು ರಾಜತಾಂತ್ರಿಕರಿಗೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬೆದರಿಕೆಗಳು ಬಂದಿವೆ ಎಂದು ಹೇಳಿದ್ದರು.