ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದರ ವಿರುದ್ಧ ಅಕ್ಟೋಬರ್ 10ರಂದು ಬೆಂಗಳೂರು ತಮಿಳುನಾಡು ಗಡಿಭಾಗದ ಅತ್ತಿಬೆಲೆಯಲ್ಲಿ ಹೆದ್ದಾರಿ ತೆಡದು ಪ್ರತಿಭಟನೆ ನಡೆಸುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆಯೊಂದನ್ನು ಹೊರಡಿಸಿರುವ ಅವರು, ಈಗಾಗಲೇ ಹೇಳಿದಂತೆ ಕೆಆರ್ಎಸ್ಗೆ ಇಂದಿನಿಂದ ಪಾದಯಾತ್ರೆ ನಡೆಸುವ ಮೂಲಕ ಮುತ್ತಿಗೆ ಹಾಕಲಾಗುದು. ಅಕ್ಟೋಬರ್ 10 ರಂದು ವಿವಿಧ ಕನ್ನಡಪರ ಸಂಘಟನೆಗಳು ಜೊತೆಗೂಡಿ ಹೆದ್ದಾರಿ ಬಂದ್ ಮಾಡಿ ತಮಿಳುನಾಡು ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ತಿಳಿಸಿದ್ದಾರೆ.