ಅಕ್ಟೋಬರ್‌ 11ರಂದು ಬೆಂಗಳೂರಿನಿಂದ MEMU ರೈಲುಗಳ ಸಂಚಾರ ರದ್ದು

ಬೆಂಗಳೂರು: ಯಲಹಂಕ-ಧರ್ಮಾವರಂ ವಿಭಾಗದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 11ರಂದು ಬೆಂಗಳೂರಿನಿಂದ ಹೊರಡುವ ಮೇನ್‌ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ (MEMU) ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರೈಲು ಸಂಖ್ಯೆಗಳು 06515/06516 KSR ಬೆಂಗಳೂರು-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-KSR ಬೆಂಗಳೂರು MEMU ವಿಶೇಷ ಮತ್ತು 06595/06596 KSR ಬೆಂಗಳೂರು-ಧರ್ಮಾವರಂ-KSR ಬೆಂಗಳೂರು MEMU ರೈಲುಗಳ ಸಂಚಾರವನ್ನು ಅ. 11 ರಂದು ರದ್ದುಗೊಳಿಸಲಾಗಿದೆ. ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಮೆಮು ರೈಲುಗಳು ಮೈಸೂರು ನಗರ ನಿಲ್ದಾಣದ ಬದಲು ಅಶೋಕಪುರಂ ನಿಲ್ದಾಣದಿಂದ ಸಂಚಾರ ನಡೆಸಲಿವೆ. ದಸರಾ ಸಂದರ್ಭದಿಂದ ಎಲ್ಲಾ ರೈಲುಗಳು ಮೈಸೂರು ನಗರದ 2ನೇ ಅತಿ ದೊಡ್ಡ ನಿಲ್ದಾಣ ಅಶೋಕಪುರಂನಿಂದಲೇ ಹೊರಡಲಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement