ಅಕ್ಟೋಬರ್ 5ರಿಂದ 13ರವರೆಗೆ ಶರಣ ಸಂಸ್ಕೃತಿ ಉತ್ಸವ .!

 

ಚಿತ್ರದುರ್ಗ : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಿಂದ ಪ್ರತಿವರ್ಷದಂತೆ ಈ ಬಾರಿಯ ಶರಣಸಂಸ್ಕೃತಿ ಉತ್ಸವವನ್ನು ಅಕ್ಟೋಬರ್ 5ರಿಂದ 13ರವರೆಗೆ 9ದಿನಗಳ ಕಾಲ ನಡೆಯಲಿದೆ.

ಶ್ರೀಮಠದಲ್ಲಿ ಜರುಗಿದ ಉತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಶ್ರೀಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಮಾತನಾಡಿ, ಈ ಬಾರಿಯ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀ ಮ.ನಿ.ಪ್ರ. ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು, ಶ್ರೀ ರುದ್ರೇಶ್ವರ ವಿರಕ್ತಮಠ, ಹೆಬ್ಬಾಳು ಗೌರವ ಉಪಾಧ್ಯಕ್ಷರಾಗಿ ಶ್ರೀ ಮ.ನಿ.ಪ್ರ. ಮೋಕ್ಷಪತಿ ಮಹಾಸ್ವಾಮಿಗಳು, ಶ್ರೀ ಮುರುಘಾಮಠ, ರಾವಂದೂರು ಗೌ| ಕಾರ್ಯಾಧ್ಯಕ್ಷರನ್ನಾಗಿ ಡಿ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರು, ಗೋವಿಂದ ಎಂ. ಕಾರಜೋಳ, ಸಂಸದರು, ಚಿತ್ರದುರ್ಗ, ಉತ್ಸವ ಸಮಿತಿ ಅಧ್ಯಕ್ಷರಾಗಿ ಕೆ.ಸಿ. ವೀರೇಂದ್ರ ಪಪ್ಪಿ, ಶಾಸಕರು, ಚಿತ್ರದುರ್ಗ ಇವರುಗಳನ್ನು ಆಯ್ಕೆ ಮಾಡಲಾಗಿದೆ. ಉತ್ಸವವು ಅರ್ಥಪೂರ್ಣವಾಗಿ ಸರಳವಾಗಿ ಆಯೋಜಿಸಲಾಗುವುದು. ಭಕ್ತರ ಸಹಕಾರ ಮುಖ್ಯ. ಶ್ರೀಮಠದ ಪರಂಪರೆಯAತೆ ಎಲ್ಲಾ ಗೋಷ್ಠಿಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

Advertisement

ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಈವರ್ಷಕ್ಕೆ ಪೀಠದ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ ಜಯಂತಿ 150 ವರ್ಷಗಳಾಗಲಿದೆ. 53 ವರ್ಷಗಳ ಕಾಲ ಶ್ರೀಮಠದ ಪೀಠವನ್ನು ಅಲಂಕಸಿರುತ್ತಾರೆ. ಶ್ರೀಗಳ 100ನೇ ಜಯಂತಿಯನ್ನು ದಾವಣಗೆರೆಯಲ್ಲಿ ಮಲ್ಲಿಕಾರ್ಜುನ ಶ್ರೀಗಳು ಆಚರಿಸುತ್ತಾರೆ. ಈ ವರ್ಷ ಪೂರ್ತಿ ಜಯದೇವ ಶ್ರೀಗಳ ಕುರಿತು ಅರ್ಥಪೂರ್ಣವಾಗಿ 150 ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಮಧ್ಯಕರ್ನಾಟಕದ ನಾಡಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಈ ಬಾರಿ ಪುರುಷ ಮತ್ತು ಮಹಿಳಾ ಕ್ರೀಡಾಕೂಟವನ್ನು 150ನೇ ವರ್ಷದ ಜಯಂತಿ ಅಂಗವಾಗಿ ಶ್ರೀ ಜಯದೇವ ಶ್ರೀಗಳ ಹೆಸರಿನಲ್ಲಿ ಆಯೋಜಿಸಲಾಗುವುದು ಎಂದರು.

ಸAಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಶ್ರೀಮಠಕ್ಕೆ ತನ್ನದೇ ಆದ ಇತಿಹಾಸವಿದ್ದು, ಜಾತಿ, ಮತ, ಲಿಂಗಭೇದವಿಲ್ಲದೆ ಬಸವಾದಿ ಶರಣರ ಆಶಯಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಶೂದ್ರರಿಗೆ ಶಿಕ್ಷಣ ಕೊಡಲು ಸಾಧ್ಯವಾಗದ ಸಂದರ್ಭದಲ್ಲಿ ಚಿತ್ರದುರ್ಗ ಬೃಹನ್ಮಠ ಅಂತಹ ಅವಕಾಶವನ್ನು ಮಾಡಿಕೊಟ್ಟಿದೆ. ಶರಣಸಂಸ್ಕೃತಿ ಉತ್ಸವದಲ್ಲಿ ಗತವೈಭವದ ಚಿಂತನೆಗಳು ನಡೆಯಲಿ ಪ್ರತಿದಿನವೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆಂದರು.

ಶ್ರೀ ವಚನಾನಂದ ಸ್ವಾಮಿಗಳು ಮಾತನಾಡಿ, ಶ್ರೀಮಠಕ್ಕೆ ನಾಡಿನಾದ್ಯಂತ ಶಾಖಾಮಠಗಳು, ಹಾಸ್ಟೆಲ್‌ಗಳಿವೆ. ಇದು ವರ್ಷದ ಕಾರ್ಯಕ್ರಮವಾಗಬೇಕು. ಜಯದೇವ ಶ್ರೀಗಳ ಹೆಸರಿನ ಅಂಚೆಚೀಟಿ, ನಾಣ್ಯಗಳ ಬಿಡುಗಡೆಯಾಗಲು ಕ್ರಮವಹಿಸಬೇಕು ಎಂದು ಹೇಳಿದರು.

ಶ್ರೀಮತಿ ಮೋಕ್ಷರುದ್ರಸ್ವಾಮಿ, ಶ್ರೀಮತಿ ರುದ್ರಾಣಿ ಗಂಗಾಧರ್, ಕೆಇಬಿ ಷಣ್ಮುಖಪ್ಪ, ಅನೀಸ್, ಮಂಜುನಾಥ ದಾಳಿಂಬೆ, ವೀರೇಂದ್ರಕುಮಾರ್ ಪಿ., ವೀರಶೈವ ಸಮಾಜ, ಅಖಿಲಭಾರತ ವೀರಶೈವ ಮಹಾಸಭೆ, ಹಾಗೂ ಇತರೆ ಸಮಾಜಗಳ ಮುಖಂಡರು, ಶಾಲಾಕಾಲೇಜುಗಳ ಮುಖ್ಯಸ್ಥರು ಇದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement