ನವದೆಹಲಿ: ಬಿಜೆಪಿಯು ಕೇವಲ ಜನರಿಂದ ಹಣ ಲೂಟಿ ಮಾಡುವ ಕೆಲಸವನ್ನು ಮಾಡುತ್ತಿದೆ. ಪಕ್ಷ ಅಧಿಕಾರದಲ್ಲಿರುವ ಅಚ್ಛೇ ದಿನ್ ಎಂದು ಹೇಳಿ ಇದೀಗಾ ಜನರನ್ನೇ ಉಸಿರುಗಟ್ಟಿಸುತ್ತಿದ್ದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಇಂಧನ ಬೆಲೆ ಏರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ ಅವರು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಳೆದ 19 ತಿಂಗಳಲ್ಲಿ ತೈಲ ಬೆಲೆಯು ಶೇಕಡಾ 31ರಷ್ಟು ಕಡಿಮೆಯಾಗಿದೆ. ಆದರೆ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾತ್ರ ತೈಲ ಬೆಲೆಯನ್ನು ಕಡಿಮೆ ಮಾಡುತ್ತಿಲ್ಲ ಎಂದು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಕೀಡಿಕಾರಿದ್ದಾರೆ.
ಇನ್ನು ಮೋದಿ ಸರ್ಕಾರವು ಕೇವಲ ಅಚ್ಛೇ ದಿನ್ ಎಂದು ಜಾಹೀರಾತುಗಳಲ್ಲಿ ಹಾಗೂ ಭಾಷಣಗಳಲ್ಲಿ ಕೇಳುತ್ತ ಓಡಾಡುತ್ತಿದೆ. ಜನರ ಬೇಕು-ಬೇಡಗಳಿಗೆ ಸ್ಪಂದಿಸುತ್ತಿಲ್ಲ.
ಆದರೆ ಈಗಾಗಲೇ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 8 ರಿಂದ 10 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 3 ರಿಂದ 4 ರೂ ಲಾಭ ಪಡೆಯುತ್ತಿದೆ ಎಂದು ಖರ್ಗೆ ತಿಳಿಸಿದ್ದಾರೆ.