ಉತ್ತರ ಅಮೆರಿಕಾದ ಜಾನಪದ ಹಿನ್ನಲೆಯುಳ್ಳ ಮನುಷ್ಯನನ್ನು ಹೋಲುವ ದೊಡ್ಡ ಪಾದದ ಜೀವಿಯನ್ನು ಕಾಡಿನಲ್ಲಿ ನೋಡಿರುವುದಾಗಿ ಬಹಳಷ್ಟು ಜನ ಹೇಳಿಕೊಂಡಿದ್ದರು. ಆದ್ರೆ ಇದುವರೆಗೂ ಇದನ್ನು ಅಧಿಕೃತವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದ್ರೆ ಇದೀಗ ವ್ಯಕ್ತಿಯೊಬ್ಬರು ತಾನು ಓಕ್ಲಾಹಾಮಾದ ಲಾಟನ್‌ನಲ್ಲಿರುವ ಪ್ಯಾರಲಲ್ ಅಡವಿಯಲ್ಲಿ ಈ ಪ್ರಾಣಿಯನ್ನು ನೋಡಿದ್ದಾಗಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿರುವ ವ್ಯಕ್ತಿ ಇದು ನನ್ನ ಜೀವನದ ಭಯಾನಕ ಕ್ಷಣ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ಈ ಕುರಿತಾದ ಒಂದು ವರದಿಯನ್ನು ಪ್ರಕಟಿಸಿದ್ದು, ಅದರಲ್ಲಿ ಈ ದೊಡ್ಡ ಪಾದದ ಪ್ರಾಣಿ ಕಂಡು ಬಂದ ಬಗ್ಗೆ ಬರೆಯಲಾಗಿದೆ. ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ದೈತ್ಯಾಕಾರದ ಮಾನವನನ್ನು ಹೋಲುವ ಪ್ರಾಣಿಯೊಂದು ಮರದ ಬುಡದಲ್ಲಿ ಕುಳಿತು ಅಲ್ಲಿನ ಹೂವನ್ನು ಕೀಳುತ್ತಿರುವ ದೃಶ್ಯ ಸೆರೆಯಾಗಿದೆ. ಕೇವಲ ಒಂಬತ್ತು ಸೆಕೆಂಡ್ ಮಾತ್ರ ಈ ದೃಶ್ಯ ಕಂಡು ಬಂದಿದೆ. ಇಷ್ಟೇ ಅಲ್ಲದೆ ನ್ಯೂಯಾರ್ಕ್ ಪೋಸ್ಟ್ ಈ ಹಿಂದೆ ಇಂತಹ ಪ್ರಾಣಿ ಕಂಡು ಬಂದ ಕ್ಷಣ ಹಾಗೂ ಅದರ 16 ಇಂಚಿನ ಪಾದದ ಹೆಜ್ಜೆ ಗುರುತಿನ ಚಿತ್ರವನ್ನು ಪೋಸ್ಟ್ ಮಾಡಿದೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದ್ದು, ನಿಜವಾಗಿಯೂ ಇಂತಹ ಒಂದು ಜೀವಿ ಇದೆಯಾ ಎಂಬ ಗೊಂದಲ ಸೃಷ್ಟಿಸಿದೆ. ಅನೇಖರು ಅಮೆರಿಕಾದ ಪೌರಾಣಿಕ ಹಿನ್ನಲೆ ಉಳ್ಳ ಜನಪದಲ್ಲಿ ಸೇರಿಕೊಂಡಿರುವ ಈ ಜೀವಿ ಈಗಲೂ ಇದೆ ಎಂದು ವಾದ ಮಂಡಿಸಿದ್ದಾರೆ. ಇನ್ನೂ ಕೆಲವರು ಇದೊಂದು ಅಸ್ಪಷ್ಟ ವಿಡಿಯೋ ಆಗಿದ್ದು ಇದು ನಂಬಿಕೆಗೆ ಅರ್ಹವಾಗಿಲ್ಲ ಎಂದಿದ್ದಾರೆ. ಹಾಗೇ ಇನ್ನೂ ಕೆಲವರು ನಾವೂ ಇದನ್ನು ನೋಡಿದ್ದು, ದೃಶ್ಯ ಸೆರೆ ಹಿಡಿದಿಲ್ಲ ಎಂದಿದ್ದಾರೆ.
ಮನುಷ್ಯಂತೆ ದೇಹ ರಚನೆ ಹೊಂದಿರುವ ದೈತ್ಯಾಕಾರದ ಮೈಮೇಲೆ ರೋಮಗಳನ್ನು ಹೊಂದಿರುವ ಜೀವಿ ಇಂದಿಗೂ ಅರಣ್ಯ ಪ್ರದೇಶದಲ್ಲಿ ಇದೆ ಎಂದು ಅಮೆರಿಕಾದ ಜನರು ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಜೀವಿಯ ಬಗ್ಗೆ ಅನೇಕ ಕಥೆಗಳಿದ್ದು, ಇದಕ್ಕೆ ವೈಜ್ಞಾನಿಕ ಪುರಾವೆಗಳೂ ಸಿಕ್ಕಿದೆ ಎಂದು ಹೇಳಾಗಿದೆ. ಆದ್ರೆ ಈಗ ಹರಿದಾಡುತ್ತಿರುವ ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ.