ನವದೆಹಲಿ: ಉದ್ಯಮಿ ಗೌತಮ್ ಅದಾನಿ ಹಾಗೂ ಹಿಂಡೇನ್‌ಬರ್ಗ್ ಪ್ರಕರಣದಲ್ಲಿ ತನಿಖೆಯನ್ನು ಸೆಬಿಯಿಂದ ವಿಶೇಷ ತನಿಖಾ ತಂಡ (ಎಸ್ಐಟಿ) ಅಥವಾ ಕೇಂದ್ರೀ ಯ ತನಿಖಾ ದಳ (ಸಿಬಿಐ)ದ ಕ್ರಿಮಿನಲ್ ತನಿಖೆಗೆ ವರ್ಗಾಯಿಸುವುದಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ಸೆಬಿಯೇ 3 ತಿಂಗಳೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲಿದೆ. ಸೆಬಿ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಕ್ಕೆ ಸುಪ್ರೀಂಕೋರ್ಟ್‌ಗೆ ಸೀಮಿತ ಅಧಿಕಾರ ವ್ಯಾಪ್ತಿಯಿದೆ. ಹೀಗಿರುವಾಗ, ಅದಾನಿ ವಿರುದ್ಧದ ತನಿಖೆಯನ್ನು ಸೆಬಿಯಿಂದ ಎಸ್‌ಐಟಿಗೆ ವರ್ಗಾಯಿಸುವುದಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳಿದೆ.
SEBI ತನ್ನ ತನಿಖೆಯನ್ನು ಕಾನೂನಿನ ಪ್ರಕಾರ ಮುಂದುವರಿಸುತ್ತದೆ ಎಂದು ಧೃಡಪಡಿಸಿದ ಸುಪ್ರೀಂ ಕೋರ್ಟ್ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ SEBI ಕೊರತೆಗಳಿವೆ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ. ಅದಾನಿ ಗ್ರೂಪ್ ಮತ್ತು ಸೆಕ್ಯು ರಿಟೀಸ್ ಮತ್ತು ಎಕ್ಸ್ಚೇಂ ಜ್ ಬೋರ್ಡ್ ಆಫ್ ಇಂಡಿಯಾ (SEBI) ಗೆ ಕ್ಲೀ ನ್ ಚಿಟ್ ನೀಡಿದ ತನ್ನ ಸಮಿತಿಯ ವರದಿಯನ್ನು ಎತ್ತಿಹಿಡಿದಿದೆ. ಮಾತ್ರವಲ್ಲದೇ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ಮತ್ತು ಸೆಬಿಯಿಂದ ತನಿಖೆಯನ್ನು ವರ್ಗಾಯಿಸುವ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕ ರಿಸಿದೆ.