ಮುಂಬೈ: ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಕೈಯಲ್ಲಿ ಲಗೇಜ್ ಇಟ್ಟುಕೊಂಡು ಮುಂಬೈನಾದ್ಯಂತ ಅಲೆದಾಡಿದ್ದೇನೆ ಎಂದು ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.
ಹದಿಹರೆಯದ ವಯಸ್ಸಿನಲ್ಲಿ ಮುಂಬೈ ನಗರಕ್ಕೆ ಬಂದೆ. ಆಗ ಸಿನಿಮಾ ರಂಗದಲ್ಲಿ ನನಗೆ ಯಾವುದೇ ಸ್ನೇಹಿತರು/ ಸಂಬಂಧಿಗಳಿರಲಿಲ್ಲ. ಈ ಅವಕಾಶಗಳ ಹುಡುಕಾಟದಲ್ಲಿ ಹಲವು ಬಾರಿ ಮಧ್ಯರಾತ್ರಿ ಆಗಿರುತಿತ್ತು.
ಕೈಯಲ್ಲಿ ಸೂಟ್ ಕೇಸ್ ಹಿಡಿದು ಕ್ಯಾಬ್‌ಗಳಲ್ಲಿ ಓಡಾಡುತ್ತಿದ್ದೆ. ಅದರಲ್ಲೇ ಮಲಗುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ದೀಪಿಕಾ ಮೆಲಕು ಹಾಕಿದ್ದಾರೆ.!