ನವದೆಹಲಿ: ಮುಂದಿನ ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವುಗೆಲುವು ಸಾಧಿಸಿದರೆ, ರಾಜಸ್ಥಾನ, ಕರ್ನಾಟಕ ಮತ್ತು ಛತ್ತೀಸ್ ಗಢ ಮಾದರಿಯ ಆಡಳಿತವನ್ನು ಅಳವಡಿಸಿಕೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಮಿಜೋರಾಂ ನ ಐಜ್ವಾಲ್ನಲ್ಲಿ ಮಾಧ್ಯಮಗಳೊಂದಿಗೆ ಸಂವಾದದ ವೇಳೆ, ರಾಜಸ್ಥಾನದ 25 ಲಕ್ಷ ರೂ.ಗಳ ಆರೋಗ್ಯ ವಿಮೆಯು ವಿಶ್ವದಲ್ಲೇ ಅತ್ಯುತ್ತಮವಾಗಿದ್ದರೆ, ಕರ್ನಾಟಕದಲ್ಲಿ ಐದು ಸಾಮಾಜಿಕ ಭದ್ರತಾ ಗ್ಯಾರಂಟಿ ಯೋಜನೆಗಳು ಮತ್ತು ಛತ್ತೀಸ್ಗಢದಲ್ಲಿ ರೈತರ ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಯೋಜನೆಗಳು ದೇಶದಲ್ಲೇ ಅತ್ಯುತ್ತಮವಾಗಿವೆ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ರಾಜ್ಯ ಮಿಜೋರಾಂ ಪ್ರವೇಶಿಸಲು ZPM (ಜೋರಾಂ ಪೀಪಲ್ಸ್ ಮೂವ್‌ಮೆಂಟ್) ಮತ್ತು MNF (ಮಿಜೋ ನ್ಯಾಷನಲ್ ಫ್ರಂಟ್) ಎರಡೂ ಪಕ್ಷಗಳು ಸಾಧನಗಳಾಗಿವೆ ಎಂದು ಇದೇ ವೇಳೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.