ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ವಿನೇಶ್ ಫೋಗಟ್ ಅವರು ಕುಸ್ತಿ ಸ್ಪರ್ಧೆಯಿಂದ ಅನರ್ಹಗೊಂಡ ಬೆನ್ನಲ್ಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಒಲಿಂಪಿಕ್ಸ್ ರೆಸ್ಲಿಂಗ್ ಸೆಮಿಫೈನಲ್ನಲ್ಲಿ ಭರ್ಜರಿಯಾಗಿ ಸ್ಪರ್ಧಿಸಿದ್ದ ವಿನೇಶ್ ಪೋಗಟ್ ಫೈನಲ್ ಪ್ರವೇಶಿಸಿದ್ದರು.
ಇದಾದ ಬಳಿಕ ತೂಕದ ವಿಚಾರದಲ್ಲಿ 100 ಗ್ರಾಂ ಹೆಚ್ಚಿಗೆ ಇರುವ ಕಾರಣ ಒಲಿಂಪಿಕ್ಸ್ನಿಂದ ಅವರನ್ನು ಅನರ್ಹ ಗೊಳಿಸಲಾಗಿತ್ತು. ಇದರಿಂದ ವಿನೇಶ್ ಫೋಗಟ್ ಅವರಿಗೆ ತೀವ್ರ ಬೇಸರಕ್ಕೆ ಕಾರಣವಾಗಿತ್ತು. ಇದು ಇಡೀ ಭಾರತೀಯರಿಗೆ ಶಾಕ್ ನೀಡಿತ್ತು.
ಇದರ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದ್ದು ವಿನೇಶ್ ಪೋಗಟ್ ಅವರು ಕುಸ್ತಿಗೆ ನಿವೃತ್ತಿ ಘೋಷಣೆ ಮಾಡಿದ್ದು ನನ್ನನ್ನು ಕ್ಷಮಿಸಿ ಬಿಡಿ ಎಂದಿದ್ದಾರೆ. ತೂಕ ಇಳಿಸಿಕೊಳ್ಳಲು ಇಡೀ ರಾತ್ರಿಯೆಲ್ಲ ಕಸರತ್ತು ಮಾಡಿದರು ಫಲ ನೀಡಿರಲಿಲ್ಲ.
ಆದರು ಅನರ್ಹಗೊಂಡರು. 2001ರಲ್ಲಿ ಕ್ರೀಡೆಗೆ ಪ್ರವೇಶಸಿದ್ದ ಅವರು 2024ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಿವೃತ್ತಿ ಘೋಷಣೆ ಮಾಡಿದ್ದಾರೆ.