ಅನಿಮಲ್‌ ಚಿತ್ರದಲ್ಲಿ ಗೀತಾಂಜಲಿಯಾದ ರಶ್ಮಿಕಾ ಮಂದಣ್ಣ!

ಮುಂಬಯಿ: ರಣಬೀರ್‌ ಕಪೂರ್ – ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಅನಿಮಲ್’ ಚಿತ್ರದಲ್ಲಿನ ರಣ್‌ಬೀರ್ ಖಡಕ್ ಲುಕ್ ರಿವೀಲ್ ಮಾಡಿ, ಚಿತ್ರದ ಟೀಸರ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಂದೀಪ್ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾದಲ್ಲಿ ರಣಬೀರ್‌ ಕಪೂರ್ ಇದೆಂದೂ ಕಾಣಿಸಿಕೊಳ್ಳದ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರ ಪಾತ್ರದ ಪೋಸ್ಟರ್ ಮೂಲಕ ಚಿತ್ರತಂಡ ರಿವೀಲ್ ಮಾಡಿತ್ತು. ಇದೇ ಸೆ.28 ರಂದು ಸಿನಿಮಾದ ಟೀಸರ್ ರಿಲೀಸ್ ಆಗಲಿದೆ.

ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಅವರ ಪಾತ್ರದ ಲುಕ್ ಹಾಗೂ ಕ್ಯಾರೆಕ್ಟರ್ ನೇಮ್ ಶನಿವಾರ ರಿವೀಲ್ ಆಗಿದೆ. ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ‘ಗೀತಾಂಜಲಿ’ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರು ಕೆಂಪು ಸೀರೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಕೆಳಗೆ ನಿಮ್ಮ ಗೀತಾಂಜಲಿ ಎಂದು ಬರೆಯಲಾಗಿದೆ.

Advertisement

ಡಿಸೆಂಬರ್ 1 ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ರಣಬೀರ್‌, ರಶ್ಮಿಕಾ ಜೊತೆಗೆ ಬಾಬಿ ಡಿಯೋಲ್, ಅನಿಲ್ ಕಪೂರ್ ಸೇರಿದಂತೆ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ರಣ್‌ಬೀರ್-ರಶ್ಮಿಕಾ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement