ಬೆಂಗಳೂರು: ಅನುಕಂಪದ ಆಧಾರದ ಮೇಲೆ ನೀಡುವ ನೌಕರಿ ಕುರಿತಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪುತ್ರನಂತೆ ಪುತ್ರಿಗೂ ತಂದೆಯ ಮರಣದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯುವ ಹಕ್ಕಿದೆ. LIC ಉದ್ಯೋಗಿಯಾಗಿದ್ದ ತಂದೆ ಮರಣ ಹೊಂದಿದ್ದು, ಅವರ ಹುದ್ದೆಯನ್ನು ತಮಗೆ ನೀಡುವಂತೆ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಮದುವೆಯಾದ ಮಗಳಿಗೆ ತಂದೆಯ ಹುದ್ದೆಯನ್ನು ಅನುಕಂಪದ ಆಧಾರದಲ್ಲಿ ನೀಡಲಾಗದು ಎಂದು ತೀರ್ಪಿತ್ತಿದೆ.