ಮುಂಬೈ : ಬಾಲಿವುಡ್ ನಟ ಅರ್ಜುನ್ ಕಪೂರ್‌ಗೆ ಇತ್ತೀಚೆಗೆ ಅವಕಾಶಗಳು ಕಡಿಮೆ ಆಗಿವೆ. ಇದೀಗ ಅವರು ಅಪರೂಪದ ಖಾಯಿಲೆಯೊಂದರಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಜಯ್ ದೇವಗನ್ ನಾಯಕನಾಗಿ ನಟಿಸಿರುವ ‘ಸಿಂಗಂ ಅಗೇನ್’ ಚಿತ್ರದಲ್ಲಿ ಅರ್ಜುನ್ ಕಪೂರ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ಬಳಿಕ ಸಮದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಾವು ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಜೊತೆಗೆ ತಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ತಾವು ಹಷಿಮೋಟೋ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಅರ್ಜುನ್ ಕಪೂರ್ ತಿಳಿಸಿದ್ದಾರೆ. ಈ ಸಮಸ್ಯೆ ಇರುವ ವ್ಯಕ್ತಿಯ ರೋಗನಿರೋಧಕ ಕಣಗಳು, ದೇಹದ ಕೆಲ ಭಾಗಗಳನ್ನು ಹಾನಿ ಮಾಡುತ್ತವೆ. ಅರ್ಜುನ್ ಕಪೂರ್‌ಗೆ ಇರುವ ಸಮಸ್ಯೆಯಿಂದ ಅವರೊಳಗೆ ರೋಗನಿರೋಧಕ ಶಕ್ತಿ, ಅವರ ಥೈರಾಯ್ಡ್ ಗೆ ಹಾನಿ ಮಾಡುತ್ತಿತ್ತಂತೆ. ಇದು ಮಾತ್ರವೇ ಅಲ್ಲದೆ ಅವರು ನಟಿ ಸಮಂತಾ ಬಳಲುತ್ತಿದ್ದ ಆಟೋಇಮ್ಯೂನ್ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಈ ಎರಡೂ ಕಾಯಿಲೆಗಳಿಗೆ ಚಿಕಿತ್ಸೆ ಸಹ ಪಡೆಯುತ್ತಿದ್ದಾರೆ ಎಂಬ ಸಂಗತಿ ಬಹಿರಂಗವಾಗಿದೆ.
ಇಷ್ಟೇ ಅಲ್ಲದೇ ಕಳೆದ ವರ್ಷ ತಾನು ಖಿನ್ನತೆಗೆ ಸಹ ಗುರಿಯಾಗಿದ್ದೆ. ನನಗೆ ಅವಕಾಶಗಳು ಸಿಗುತ್ತಿರಲಿಲ್ಲ.ನನ್ನ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಕೆಟ್ಟದಾಗಿ ಪ್ರದರ್ಶನ ಕಾಣುತ್ತಿದ್ದವು. ಬೇರೆಯವರ ಸಿನಿಮಾ ನೋಡಿ ನನಗೆ ಹೀಗೆ ಮಾಡಲು ಸಾಧ್ಯವೇ ಇಲ್ಲ ಅನಿಸಲು ಪ್ರಾರಂಭವಾಯ್ತು. ನನಗೆ ಸಿನಿಮಾಗಳೆಂದರೆ ಪಂಚ ಪ್ರಾಣ, ಆದರೆ ಸಿನಿಮಾ ನೋಡುವುದನ್ನೇ ನಾನು ಬಿಟ್ಟುಬಿಟ್ಟಿದ್ದೆ. ಹಲವು ಥೆರಪಿಸ್ಟ್ಗಳನ್ನು ಭೇಟಿ ಮಾಡಿದೆ ಆದರೆ ಅವರಿಂದ ಉಪಯೋಗ ಆಗಲಿಲ್ಲ. ಕೊನೆಗೆ ಒಬ್ಬ ವೈದ್ಯರು ಸಿಕ್ಕರು, ಅವರಿಂದ ನನ್ನ ಖಿನ್ನತೆ ಸರಿಹೋಯ್ತು ಎಂದು ಅರ್ಜುನ್ ಕಪೂರ್ ತಿಳಿಸಿದ್ದಾರೆ.