ಅನಾದಿ ಕಾಲದಿಂದಲೂ ವಾರಕ್ಕೊಮ್ಮೆ ಮನೆದೇವರ ಹೆಸರಲ್ಲಿ ಮನೆ ಸ್ವಚ್ಛತೆ ಮಾಡುವ ಪದ್ಧತಿ ಕಣ್ಮರೆ ಆಗಿದೆ. ಆಧುನಿಕತೆ ಪ್ರವೇಶಿಸಿದೆ. ಆದರೆ, ಸ್ವಚ್ಛತೆ ಮಾತ್ರ ಎಲ್ಲೆಡೆ ಕಣ್ಮರೆ ಆಗಿದೆ. ಪರಿಣಾಮ ನಾವುಗಳೇ ಮಾರಾಣಾಂತಿಕ ಕಾಯಿಲೆ ಡೆಂಘೆ ರೋಗವನ್ನು ಬರಮಾಡಿಕೊಳ್ಳುತ್ತಿದ್ದೇವೆ.
ಇದಕ್ಕೆ ಕಡಿವಾಣ ಹಾಕಿ ಆರೋಗ್ಯ ಬದುಕು ನಡೆಸಲು ಸುಲಭ ಹಾದಿಗಳಿವೆ. ಡೆಂಘೆ ರೋಗಕ್ಕೆ ಭಯಗೊಳ್ಳಬೇಕಿಲ್ಲ. ಮುಂಜಾಗ್ರತೆ ಕ್ರಮಗಳು ಅಗತ್ಯ. ಅದರಲ್ಲಿ ಸ್ವಚ್ಚತೆಯೇ ಪ್ರಧಾನ ಅಂಶ ಎಂಬ ಸತ್ಯ ಅರಿತುಕೊಳ್ಳಬೇಕು.
ಈ ಕುರಿತು ಜನಪರ ಕಾರ್ಯಕ್ರಮಗಳ ಮೂಲಕ ಜನಪ್ರೀಯತೆ ಗಳಿಸಿರುವ BCSuddi.co. ಮಾರಾಣಾಂತಿಕ ರೋಗ ಡೆಂಘೆ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಯಾವ ಸೊಳ್ಳೆ ಅಪಾಯ ಈ ಕುರಿತು ಬೆಳಕು ಚೆಲ್ಲುವ ಪ್ರಯತ್ನ ನಡೆಸಲಾಗಿದೆ.
ಬಿಸಿ ಸುದ್ದಿ.ಕಾಂ ಜೊತೆ ಆರೋಗ್ಯ ಶಿಕ್ಷಣ ಅಧಿಕಾರಿ ಮಂಜುನಾಥ್ ಅವರು ಡೆಂಘೆ ರೋಗದ ಕುರಿತು ಮಾತನಾಡಿದ್ದಾರೆ. ಡೆಂಘೆ ರೋಗ ಕುರಿತು ಜನರಲ್ಲಿ ಅರಿವು ಮೂಡಿ, ಜನರು ಆರೋಗ್ಯ ಬದುಕು ನಡೆಸಿ. ಹೆಚ್ಚಿನ ವಿಚಾರಗಳಿಗೆ Bcsuddi.com ಯೂಟ್ಯೂಬ್ ಚಾನಲ್ ನೋಡಿ. ಈ ವಿಚಾರಗಳಬಗ್ಗೆ ಮಂಜುನಾಥ್ ಎನ್.ಎಸ್.ಮಂಜುನಾಥ ಆರೋಗ್ಯ ಶಿಕ್ಷಣಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಅವರ ಸಂದರ್ಶನ. !