23 ಅಪಾಯಕಾರಿ ನಾಯಿ ತಳಿಗಳ ಆಮದು, ಮಾರಾಟ, ಸಂತಾನೋತ್ಪತ್ತಿಗೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರದ ಅಧಿಸೂಚನೆಗೆ ಕರ್ನಾಟಕ ಹೈಕೋರ್ಟ್ ಕರ್ನಾಟಕಕ್ಕೆ ಸೀಮಿತವಾಗಿ ಮಧ್ಯಂತರ ತಡೆ ನೀಡಿದೆ. ಬೆಂಗಳೂರಿನ ಕಿಂಗ್ ಸೊಲೊಮನ್ ಡೇವಿಡ್& ಮರ್ಡೋನಾ ಜೋನ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. M ನಾಗಪ್ರಸನ್ನ ಈ ಮಧ್ಯಂತರ ಆದೇಶ ನೀಡಿದ್ದಾರೆ. ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದಕ್ಕೆ
ಪರಿಗಣಿಸಿರುವ ಎಲ್ಲ ಅಂಶಗಳಿರುವ ದಾಖಲೆ ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರದ ಪರವಕೀಲರಿಗೆ ಸೂಚಿಸಿದೆ.