ಮಂಗಳೂರು: ಮಳೆಗಾಲದ ಸಂದರ್ಭ ಅಪಾಯಕಾರಿ ಪ್ರದೇಶಗಳಲ್ಲಿ ರೀಲ್ಸ್ ಮಾಡಿದರೆ ಅವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಪ್ರವಾಸಿ ತಾಣ, ಬೀಚ್ ಗಳಲ್ಲಿ ಅಪಾಯಕಾರಿ ಬೋರ್ಡ್ ಆಳವಡಿಸಲಾಗಿದೆ. ಬೋರ್ಡ್ ಜೊತೆ ಕೆಲವು ಕಾನೂನುಗಳು ಅನ್ವಯವಾಗುತ್ತದೆ. ಇಂತಹ ಬೋರ್ಡ್ ಇರುವ ಪ್ರದೇಶಗಳಲ್ಲಿ ಕಾನೂನು ಮೀರಿ ರೀಲ್ಸ್ ಮಾಡಿದರೆ ಅವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಕಾಡಿನ ಮಧ್ಯೆ ಹಾಗು ಇತರ ಅಪಾಯಕಾರಿ ಪ್ರದೇಶಗಳಲ್ಲಿ ವಿಡಿಯೋ ಮಾಡುವುದು ಡೆಂಜರ್ ಆಗಿದ್ದು, ಪ್ರಕೃತಿ ಯಾವಾಗ ಯಾವ ರೀತಿ ವರ್ತಿಸುತ್ತದೆ ಎನ್ನುವುದನ್ನು ಊಹಿಸಲು ಆಗುವುದಿಲ್ಲ, ಪ್ರಾಕೃತಿಕ ವಿಕೋಪ ಯಾವಾಗ,ಹೇಗೆ ನಡೆಯುತ್ತೆ ಅನ್ನೋದನ್ನು ಹೇಳೋಕಾಗಲ್ಲ ಈ ಹಿನ್ನಲೆ ನಾನು ಮಾಧ್ಯಮಗಳ ಮೂಲಕ ಈ ರೀತಿಯ ಸಾಹಸಕ್ಕೆ ಯಾವಾತ್ತೂ ಮುಂದಾಗಬೇಡಿ ಎಂದು ಮನವಿ ಮಾಡಿದರು.