ಬೆಂಗಳೂರು : ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಗ್ಗೆ ಸಂತ್ರಸ್ತ ಅಚ್ಚರಿ ಹೇಳಿಕೆ ನೀಡಿದ್ದಾರೆ. ಸೂರಜ್ ರೇವಣ್ಣ ಅಮಾವಾಸ್ಯೆ ದಿನ ಬಳೆ ತೊಟ್ಟು, ಸೀರೆ ಉಡುತ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾನೆ. 2019ರ ಚುನಾವಣೆ ಸಂದರ್ಭದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಅರಕಲಗೂಡಿನಲ್ಲಿ ನನ್ನನ್ನು ಹೊಗಳಿ ನನ್ನ ಫೋನ್ ನಂಬರ್ ಅನ್ನು ತೆಗೆದುಕೊಂಡರು. ನಂತರ ಅವರ ವಿಸಿಟಿಂಗ್ ಕಾರ್ಡ್ ಕೊಟ್ಟರು. ನಂತರ ಅವರು ನನ್ನ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದರು ಎಂದಿದ್ದಾನೆ. ಸೂರಜ್ ರೇವಣ್ಣ ಅವರು Good Evening ಮೆಸೇಜ್ ಜತೆ ಲವ್ ಸಿಂಬಲ್ ಕಳಿಸಿ ಮಾತು ಆರಂಭಿಸಿದರು. ಬಳಿಕ ಫಾರ್ಮ್ಹೌಸ್ಗೆ ಒಂಟಿಯಾಗಿ ಕರೆಸಿಕೊಂಡು ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಸಂತ್ರಸ್ತ ಜೆಡಿಎಸ್ ಕಾರ್ಯಕರ್ತ ಹೇಳಿದ್ದಾನೆ. ಸೂರಜ್ ರೇವಣ್ಣ ಕಾಮುಕ, ಹೊರಗೆ ಒಂದು ಮುಖ, ಒಳಗೆ ಇನ್ನೊಂದು ಮುಖ. ನಾಲ್ಕು ವರ್ಷದಿಂದ ಎಲ್ಲೂ ಹೇಳಿಕೊಳ್ಳೋಕೆ ನನಗೆ ಆಗಿರಲಿಲ್ಲ, ಮನಸ್ಸಿನಲ್ಲಿ ಕಾಡುತ್ತಿತ್ತು. ಒಂದು ದಿನ ನನ್ನ ಜೊತೆಗೆ ಸೂರಜ್ ರೇವಣ್ಣ ಮಾತಾಡುತ್ತಾ ನನ್ನ ಜೀವನ ಹೇಗೆ ಏನು ಅಂತ ಎಲ್ಲಾ ಕೇಳಿದ್ರು. ನಾನು ನನ್ನ ಕೆಲಸ, ಕುಟುಂಬದ ಬಗ್ಗೆ ಹೇಳಿದೆ. ಯಾವುದಕ್ಕೂ ಯೋಚನೆ ಮಾಡಬೇಡ ನಾನು ಇದ್ದೇನೆ ಎಂದು ಹೇಳಿ ರೂಮ್ ಒಳಗೆ ಕರೆದುಕೊಂಡು ಹೋದ್ರು. ನಂತರ ನನ್ನ ಕಾಲು ಒತ್ತುವಂತೆ ಹೇಳಿದರು. ನಾನು ಕಾಲು ಒತ್ತಿದೆ.. ಮುಂದೆ ಏನಾಯ್ತು ಅಂತ ನಾನು ಹೇಳಲು ಸಾಧ್ಯವಿಲ್ಲ ಎಂದು ಸಂತ್ರಸ್ತ ಯುವಕ ವಿವರಿಸಿದ್ದಾನೆ. ಸೂರಜ್ ರೇವಣ್ಣ ನನ್ನ ಮೇಲೆ ಎಸಗಿದ ಕೃತ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಇದನ್ನು ಹೇಳಿದಾಗ, ಈ ವಿಚಾರ ಎಲ್ಲಿಯೂ ಹೇಳದಂತೆ 2 ಕೋಟಿ ರೂ. ಹಾಗೂ ಕೆಲಸದ ಆಮಿಷ ಒಡ್ಡಿದ್ದರು. ಒಪ್ಪದಿದ್ದಕ್ಕೆ ಜೀವಬೆದರಿಕೆ ಒಡ್ಡಿದ್ದರು ಎಂದು ಸಂತ್ರಸ್ತ ದೂರಿದ್ದಾನೆ.
