ಪಿಎಸಿಎಲ್ ನಂತಹ ಹಲವಾರು ಬ್ಲೇಡ್ ಕಂಪೆನಿಗಳು ಬಡವರ ಬದುಕಿನ ಕನಸಿನ ಗೋಪುರ ಕಟ್ಟುವ ಮೋಸದ ಜಾಲವನ್ನು ಹೆಣೆದು ಹಲವು ಸ್ಕೀಮ್ ಗಳ ಹೆಸರಲ್ಲಿ ಜನರಿಂದ ಹೂಡಿಸಿದ ಹಣವನ್ನು ಕೊಳ್ಳೆ ಹೊಡೆದು ಪರಾರಿಯಾಗುತ್ತಿದೆ.
ಮಂಗಳೂರು : ಪಿಎಸಿಎಲ್ ನಂತಹ ಹಲವಾರು ಬ್ಲೇಡ್ ಕಂಪೆನಿಗಳು ಬಡವರ ಬದುಕಿನ ಕನಸಿನ ಗೋಪುರ ಕಟ್ಟುವ ಮೋಸದ ಜಾಲವನ್ನು ಹೆಣೆದು ಹಲವು ಸ್ಕೀಮ್ ಗಳ ಹೆಸರಲ್ಲಿ ಜನರಿಂದ ಹೂಡಿಸಿದ ಹಣವನ್ನು ಕೊಳ್ಳೆ ಹೊಡೆದು ಪರಾರಿಯಾಗುತ್ತಿದೆ.
ದೇಶದ ಆಳುವ ಸರಕಾರಗಳ ತಪ್ಪಾದ ಆರ್ಥಿಕ ನೀತಿಗಳು ಇಂತಹ ಬ್ಲೇಡ್ ಕಂಪೆನಿಗಳು ತಮ್ಮ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಕಾರ್ಮಿಕ ಮುಖಂಡರೂ, ಪಿಎಸಿಎಲ್ ಎಜೆಂಟರ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ,
ಅವರು ಸೋಮವಾರ ನಗರದ ಮಿನಿ ವಿಧಾನಸೌಧದ ಮುಂಭಾಗ ಪಿಎಸಿಎಲ್ ನಿಂದ ಹೂಡಿಕೆದಾರರಿಗಾದ ಅನ್ಯಾಯವನ್ನು ಖಂಡಿಸಿ, ಪಿಎಸಿಎಲ್ ನಿಂದ ಹಣ ಕಳೆದುಕೊಂಡ ಸಂತ್ರಸ್ತ ಹೂಡಿಕೆದಾರರಿಗೆ ನ್ಯಾಯಯುತ ಸಿಗಬೇಕಾದ ಮೊತ್ತವನ್ನು ಮರುಪಾವತಿಲು ಒತ್ತಾಯಿಸಿ, ಸಂತ್ರಸ್ತ ಹೂಡಿಕೆದಾರರಿಗೆ ಪರಿಹಾರ ವಿತರಿಸದ ಸಿಬಿಯ ನೀತಿಯ ವಿರುದ್ಧ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದರು.