ಮುಂಬೈ: ಪ್ಲಿಪ್‌ಕಾರ್ಟ್ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಜನರನ್ನು ದಾರಿ ತಪ್ಪಿಸುವ ಸಂಭಾಷಣೆ ಹೇಳಿದ್ದಾರೆ. ಹೀಗಾಗಿ ಅವರಿಗೆ ₹10 ಲಕ್ಷ ದಂಡ ಹಾಕಬೇಕು ಎಂದು ಸಿಎಐಟಿ (Confederation of All India Traders) ದೂರು ನೀಡಿದೆ. ‘ಬಿಗ್ ಬಿಲಿಯನ್ ಡೇಸ್ ಸೇಲ್’ ಜಾಹೀರಾತಿನಲ್ಲಿ ಕಾಣಿಸಿಕೊಂಡ ಅಮಿತಾಬ್ ಬಚ್ಚನ್, “ಇಂತಹ ಆಫರ್ ನಿಮಗೆ ರೀಟೇಲ್ ಮಳಿಗೆಯಲ್ಲಿ ಸಿಗೋದಿಲ್ಲ” ಎಂದು ಅಮಿತಾಬ್ ತಾವು ನಟಿಸಿದ ಜಾಹೀರಾತಿನಲ್ಲಿ ಹೇಳಿದ್ದಾರೆ. ಆದರೆ ಇದು ಶುದ್ಧ ಸುಳ್ಳು. ಇಂತಹ ಜಾಹೀರಾತುಗಳಿಂದ ಸಣ್ಣ ವ್ಯಾಪಾರಿಗಳ ಮೇಲೆ ದೊಡ್ಡ ಹೊಡೆತ ಬೀಳುತ್ತೆ. ಹಿಗಾಗಿ ಇಂತಹ ಜಾಹೀರಾತು ಪ್ರಕಟಿಸಿದ ಪ್ಲಿಪ್‌ಕಾರ್ಟ್ ಹಾಗೂ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಾಲಿವುಟ್ ನಟ ಅಮತಾಬ್ ಬಚ್ಚನ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಿಎಐಟಿ ದೂರಿದೆ. ಆದರೆ ಈ ದೂರಿಗೆ ಪ್ಲಿಪ್‌ಕಾರ್ಟ್ ಹಾಗೂ ನಟ ಅಮಿತಾಬ್ ಬಚ್ಚನ್ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.


































