ಬೆಂಗಳೂರು: ಪ್ರಜ್ವಲ್ ರೇವಣ್ಣ ಸಲೂನ್ ಹೋಗಿ, ಕ್ಲೀನ್ ಆಗಿ ಬಂದು ವೀಡಿಯೋ ಮಾಡಿದ್ದಾರೆ. ಅದರಲ್ಲಿ ಖಿನ್ನತೆ ಏನಾದ್ರೂ ಕಾಣ್ತಾ ಇದಿಯಾ? ಇವರಿಗೇ ಖಿನ್ನತೆ ಆಗಿದ್ದರೇ ಸಂತ್ರಸ್ತೆಯರ ಪರಿಸ್ಥಿತಿ ಏನು? ಎಂದ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಪ್ರಜ್ವಲ್ ವೀಡಿಯೋವೊಂದನ್ನ ರಿಲೀಸ್ ಮಾಡಿರೋದು ಅಚ್ಚರಿ ಆಗುತ್ತಿದೆ. 6-7 ಹಂತಗಳ ಚುನಾವಣೆ ಆದ್ಮೇಲೆ ಹೊರಬಂದಿದ್ದಾರೆ. 30 ದಿನಗಳ ಹಿಂದೆ ನಿಮ್ಮ ಸ್ವಾಭಿಮಾನ ಮರ್ಯಾದೆ ನೆನಪಿರಲಿಲ್ವಾ? ನಿಮ್ಮ ಸ್ವಾಭಿಮಾನ, ಕುಟುಂಬದ ಮರ್ಯಾದೆಗಿಂತಲೂ ದೊಡ್ಡದು ವಿದೇಶದಲ್ಲಿ ಏನಿತ್ತು? ಎಂದು ಆಕೋಶ್ರ ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ , ಬಿಜೆಪಿಯವರೋ ವಿಡಿಯೋ ಮಾಡಿ ಹೊರಗೆ ಬಾ ಅಂದಿರಬೇಕು. ಇದೆಲ್ಲವೂ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ನಡೆದಿದೆ ಅಂತ ಆರೋಪಿಸಿದ್ದಾರೆ.
30 ದಿನಗಳು ಬೇಕಾ ಪ್ರಜ್ವಲ್‌ಗೆ ಸ್ಪಂದಿಸೋದಕ್ಕೆ? ಪ್ರಜ್ವಲ್ ಅಷ್ಟು ಕ್ಲೀನ್ ಆಗಿದ್ದಿದ್ದರೆ ಮೊದಲ ದಿನವೇ ರಿಯಾಕ್ಟ್ ಮಾಡಬೇಕಿತ್ತು. ಕುಂಭಕರ್ಣ ನಿದ್ರೆಯಿಂದ ಎದ್ದಮೇಲೆ ರಾಹುಲ್ ಗಾಂಧಿ.. ರಾಹುಲ್ ಗಾಂಧಿ ಅಂದ್ರೆ? ಇಡೀ ದೇಶದ ರಾಜಕಾರಣಿಗಳು ಪ್ರಜ್ವಲ್ ಬಗ್ಗೆ ಮಾತಾಡಿದ್ರು. ಅವರೆಲ್ಲರನ್ನೂ ಬಿಟ್ಟು ಕೇವಲ ರಾಹುಲ್ ಗಾಂಧಿ ಬಗ್ಗೆ ಯಾಕೆ ಮಾತಾಡ್ತಿದ್ದೀರಿ? ಇದರ ನಿರ್ದೇಶಕರು ಅಮಿತ್ ಶಾ ಅವರೇ ಇರಬೇಕು ಎಂದು ಕಿಡಿಕಾರಿದ್ದಾರೆ