ಅಮೆರಿಕದ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಘಟನೆಯಲ್ಲಿ ಐವರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮೆಡಿಟರೇನಿಯನ್ ಸಮುದ್ರ ತೀರದಲ್ಲಿ ಈ ಘಟನೆ ಸಂಭವಿಸಿದೆ, ಸೈಪ್ರಸ್ ಕರಾವಳಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಹೆಲಿಕಾಪ್ಟರ್ನಲ್ಲಿದ್ದ ಐವರು ಯೋಧರು ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ.
ಅಪಘಾತ ಸಂಭವಿಸಿದ ಮಾಹಿತಿ ತಿಳಿಯುತ್ತಿದ್ದಂತೆ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಮತ್ತು ಅದರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ಹೆಲಿಕಾಪ್ಟರ್ನಲ್ಲಿದ್ದವರು ಅಮೆರಿಕ ಮಿಲಿಟರಿಯ ವಿಶೇಷ ಕಾರ್ಯಾಚರಣೆಯ ಸಿಬ್ಬಂದಿಯಾಗಿದ್ದರು. ಸೇನಾ ತರಬೇತಿಯ ಭಾಗವಾಗಿ ವಾಯು ಇಂಧನ ತುಂಬುವ ಕಾರ್ಯಾಚರಣೆಯಲ್ಲಿದ್ದರು.
ಇನ್ನು ಸೇನಾ ಸದಸ್ಯರ ಕುಟುಂಬಗಳಿಗೆ ಗೌರವ ಮತ್ತು ರಕ್ಷಣಾ ಇಲಾಖೆಯ ನೀತಿಗೆ ಅನುಗುಣವಾಗಿ ಮೃತರ ಕುಟುಂಬಗಳಿಗೆ ತಿಳಿಸುವವರೆಗೆ ಮೃತ ಸಿಬ್ಬಂದಿಯ ಗುರುತನ್ನು 24 ಗಂಟೆಗಳಲ್ಲಿ ಬಹಿರಂಗಗೊಳಿಸುವುದಿಲ್ಲ ಎಂದು ಯುರೋಪಿಯನ್ ಕಮಾಂಡ್ ಹೇಳಿದೆ.