ಅಮೆರಿಕ : ಅಮೆರಿಕಾದಲ್ಲಿ ಪವಾಡವೊಂದು ನಡೆದಿದೆ. ಕಳೆದ 5 ವರ್ಷಗಳಿಂದ ಕೋಮಾದಲ್ಲಿ ಮಹಿಳೆಯೋರ್ವಳು ಅವಳ ತಾಯಿ ಹೇಳಿದ ಜೋಕ್ಸ್‌ನಿಂದಾಗಿ ಎಚ್ಚರಗೊಂಡಿದ್ದಾಳೆ. ಅಮೆರಿಕಾದ ಮಿಚಿಗನ್‌ನಲ್ಲಿ ಈ ಅಚ್ಚರಿ ನಡೆದಿದೆ.
ಮಿಚಿಗನ್‌ನ ಜೆನ್ನಿಫರ್ ಫ್ಲೆವೆಲೆನ್ ಎಂಬ ಯುವತಿ 5ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಕೋಮಾಗೆ ಜಾರಿದ್ದಳು. ಇದೀಗಾ ಪವಾಡವೆಂಬಂತೆ 5ವರ್ಷಗಳ ನಂತರ ತಾಯಿಯ ಜೋಕ್ಸ್ ಕೇಳಿ ಕೋಮಾದಿಂದ ಹೊರಬಂದಿದ್ದಾಳೆ. ಆರಂಭದಲ್ಲಿ ಯುವತಿಯನ್ನು ಕೋಮಾದಿಂದ ಹೊರತರಲು ಆಸ್ಪತ್ರೆಯ ನರ್ಸ್‌ಗಳು ಏನೇನೋ ಹರಸಾಹಸಗಳನ್ನು ಮಾಡಿದ್ದರು. ಆದರೆ ಏನೂ ಪ್ರಯೋಜನವಾಗಿರಲ್ಲಿಲ್ಲ. ವೈದ್ಯರ ಸಲಹೆಯಂತೆ ಈಕೆಗೆ ಆಕೆಯ ತಾಯಿ ಪ್ರತಿದಿನ ಜೋಕ್ಸ್ ಹೇಳುತ್ತಿದ್ದರು. ಸುಮಾರು ಐದು ವರ್ಷಗಳ ನಂತರ, ಮಗಳು ಇದ್ದಕ್ಕಿದ್ದಂತೆ ಜೋಕ್ಸ್ ಕೇಳಿ ಕೋಮಾದಿಂದ ಎಚ್ಚರಗೊಂಡು ನಗಾಡಿದ್ದಾಳೆ. ಸೆಪ್ಟೆಂಬರ್ 25, 2017 ರಂದು ಭೀಕರ ಕಾರು ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಜೆನ್ನಿಫರ್ ಕೋಮಾಗೆ ಜಾರಿದ್ದಳು. ಜೆನ್ನಿಫರ್ ಅವರ ತಾಯಿ ಮತ್ತು ಅವರ ಮಕ್ಕಳು ಪ್ರತಿದಿನ ಬಂದು ಅವಳಿಗೆ ತಮಾಷೆಗಳನ್ನು ಹೇಳುತ್ತಿದ್ದರು ಮತ್ತು ಮನೆಗೆ ಸಂಬಂಧಿಸಿದ ವಿಷಯಗಳನ್ನು ಮಾತನಾಡುತ್ತಿದ್ದರು. ಈಗ ತಾಯಿಯ ತಮಾಷೆಗೆ ಮಗಳು ಪ್ರತಿಕ್ರಿಯಿಸಿದ್ದಾಳೆ.