ಅಮೇಜಾನ್ ಪ್ರೈಂನಿಂದ ತೆಗೆಯಲಾಗಿದ್ದ ‘ಗಂಧದಗುಡಿ’ ಸಿನಿಮಾ ಯೂಟ್ಯೂಬ್‌ನಲ್ಲಿ ಪ್ರತ್ಯಕ್ಷ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿರುವ ಡಾಕ್ಯೂಫಿಲಂ ‘ಗಂಧದಗುಡಿ’ ಸಿನಿಮಾ ೨೦೨೨ ಅ. 28 ರಂದು ಚಿತ್ರಮಂದಿರದಲ್ಲಿ ತೆರೆಕಂಡಿತ್ತು. ಇದಾದ ಬಳಿಕ ಅಮೇಜಾನ್‌ ಪ್ರೈಂಗೆ ಬಂದಿದ್ದ ಸಿನಿಮಾವನ್ನು ಕೆಲವೆ ದಿನಗಳಲ್ಲಿ ದಿಢೀರನೆ ತೆಗೆದು ಹಾಕಲಾಗಿತ್ತು. ಇದರ ಬಗ್ಗೆ ಬಾರಿ ಚರ್ಚೆಯು ನಡೆದಿತ್ತು. ಆದರೆ ಇದೀಗ ಮತ್ತೆ ಈ ಸಿನಿಮಾ ಯುಟ್ಯೂಬ್ ನಲ್ಲಿ ಕಾಣಿಸಿಕೊಂಡಿದೆ.

ನಿರ್ದೇಶಕ ಅಮೋಘವರ್ಷ ಅವರ ಜೊತೆಗೂಡಿ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ತಯಾರಿಸಿದ್ದ ಗಂಧದಗುಡಿಯಲ್ಲಿ ಬೇರೆ ಸಿನಿಮಾಗಳಿಗೆ ಪವರ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದ ಅಪ್ಪು ಈ ಸಿನಿಮಾದಲ್ಲಿ ತಾವು ತಾವಾಗಿಯೇ ಕಾಣಿಸಿಕೊಂಡಿದ್ದರು.

ಗಂಧದಗುಡಿ ಸಿನಿಮಾ ತೆರೆಕಂಡ ಬಳಿಕ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿತ್ತು. ಆದರೆ ಅಮೇಜಾನ್ ಪ್ರೈಂನಲ್ಲಿ ದಿಢೀರನೆ ಸಿನಿಮಾ ತೆಗೆದಿದ್ದ ಕಾರಣ ಕೆಲವರ ಬೇಸರಕ್ಕೆ ಕಾರಣವಾಗಿತ್ತು.

Advertisement

ಇನ್ನು ಅಭಿಮಾನಿಗಳು ಈ ಸಿನಿಮಾ ಅಮೇಜಾನ್‌ ಪ್ರೈಂನಲ್ಲಿ ಶೀಘ್ರದಲ್ಲೇ ಅಪ್‌ಲೋಡ್ ಆಗಬಹುದು ಎಂದು ಭಾವಿಸಿದ್ದರು. ಆದರೆ ಅವರ ನೀರಿಕ್ಷೆಗೆ ವಿರುದ್ದವಾಗಿ ಈ ನಿನಿಮಾ ಬೇರೆ ಬೇರೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ಆದರೆ ವೀಕ್ಷಕರು ಹಣ ಕೊಟ್ಟು ಸಿನಿಮಾ ನೋಡಬೇಕಾದ ಪರಿಸ್ಥಿತಿ ಎದುರಾಗಿತ್ತು.

ಸದ್ಯ ಇದೀಗ ಈ ಸಿನಿಮಾ ಯುಟ್ಯೂಬ್, ಐಟ್ಯೂನ್ಸ್, ಗೂಗಲ್ ಟಿವಿ ಹಾಗೂ ಆಪಲ್ ಟಿವಿಯಲ್ಲಿ ‘ಗಂಧದಗುಡಿ’ ಸಿನಿಮಾ ಸಿಗುತ್ತಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement