ಅಯೋಧ್ಯೆ: ಅಯೋಧ್ಯೆಯಲ್ಲಿ ಮಹಿಳಾ ಸಾರಥಿ ಯೋಜನೆಯಡಿ ಮಹಿಳಾ ಚಾಲಕರು ಮತ್ತು ನಿರ್ವಾಹಕರು ಇರುವ 51 ನೂತನ ಬಸ್‌ಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಾಲನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಯೋಗಿ ಆದಿತ್ಯನಾಥ್, ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಮಹಿಳೆಯರಿಗೆ ಗೌರವ ನೀಡುವುದು ಹಾಗೂ ಅವರ ಘನತೆ ಕಾಪಾಡುವುದು ಮುಖ್ಯ. ರಾಜ್ಯ ಸಾರಿಗೆ ನಿಗಮವು 51 ಬಸ್‌ಗಳಿಗೆ ಮಹಿಳಾ ಚಾಲಕಿಯರು ಹಾಗೂ ನಿರ್ವಾಹಕರನ್ನು ನೇಮಿಸಿದೆ ಎಂದರು.
ಇನ್ನು ಈ ಬಸ್‌ಗಳಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸಲಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಹುದ್ದೆಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.