ಮುಂಬೈ: ಭಾರತೀಯ ನೌಕಾಪಡೆಯ INS ತಲ್ವಾರ್ ಇದೇ ಮೊದಲ ಬಾರಿಗೆ ಮಾದಕ ವಸ್ತು ಸಾಗಣೆ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಅರಬ್ಬಿ ಸಮುದ್ರದಲ್ಲಿ ಸಾಗಿಸಲಾಗುತ್ತಿದ್ದ 940ಕೆ.ಜಿ ಡ್ರಗ್ಸ್ ವಶಕ್ಕೆ ಪಡೆದಿದೆ.
ಈ ಬಗ್ಗೆ ಸಂಯೋಜಿತ ಕಡಲ ಪಡೆ (CMF) ಮಾಹಿತಿ ನೀಡಿದೆ. CMF 42-ರಾಷ್ಟ್ರಗಳ ನೌಕಾ ಪಾಲುದಾರಿಕೆಯಾಗಿದ್ದು, ವಿಶ್ವದ ಕೆಲವು ಪ್ರಮುಖ ಹಡಗು ಮಾರ್ಗಗಳನ್ನು ಒಳಗೊಂಡಿರುವ 3.2 ಮಿಲಿಯನ್ ಚದರ ಮೈಲುಗಳಷ್ಟು ನೀರಿನಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಮೂಲಕ ಅಂತರರಾಷ್ಟ್ರೀಯ ನಿಯಮಗಳನ್ನು ಎತ್ತಿಹಿಡಿಯುವ ಗುರಿಯನ್ನು ಹೊಂದಿದೆ.
ಕಡಲ ಭದ್ರತಾ ಕಾರ್ಯಾಚರಣೆಗಾಗಿ ಪಶ್ಚಿಮ ಅರೇಬಿಯನ್ ಸಮುದ್ರದಲ್ಲಿ ನಿಯೋಜಿಸಲಾಗಿರುವ ಭಾರತೀಯ ನೌಕಾಪಡೆಯ ಹಡಗು INS ತಲ್ವಾರ್, ಏಪ್ರಿಲ್ 13 ರಂದು ನಿಷೇಧಿತ ಮಾದಕ ವಸ್ತುವನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದೆ” ಎಂದು ಭಾರತೀಯ ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.