ಅರಿಶಿನ ಬೆರೆಸಿದ ನೀರನ್ನು ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು

ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಅರಿಶಿನಕ್ಕೆ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ವಿಶೇಷ ಸ್ಥಾನವಿದೆ. ಪೂಜೆಗಳಲ್ಲೂ ಸ್ಥಾನ ಪಡೆದಿರುವ ಅರಿಶಿನ ಆರೋಗ್ಯಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ನೀಡುತ್ತದೆ.

ಸಾಮಾನ್ಯವಾಗಿ ಭಾರತೀಯರು ತಮ್ಮ ಅಡುಗೆಗಳಲ್ಲಿ ಅರಿಶಿನವನ್ನು ಬಳಸಿಯೇ ಬಳಸಿರುತ್ತಾರೆ. ಆದರೆ ಪ್ರತಿದಿನ ಒಂದು ಚಿಟಿಕೆ ಅರಿಶಿನ ಬೆರೆಸಿದ ನೀರನ್ನು ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು.

* ಬೆಳಗ್ಗೆ ಅರಿಶಿನ ನೀರು ಸೇವನೆಯಿಂದ ದೇಹವು ಕೊಬ್ಬನ್ನು ಕರಗಿಸಿ ತೂಕವನ್ನು ಕಡಿಮೆ ಮಾಡುತ್ತದೆ.

Advertisement

* ಅರಿಶಿನದ ನೀರು ಜೀರ್ಣಕಾರಿ ಕಿಣ್ವಗಳಲ್ಲಿ ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.

* ಮೈಯಲ್ಲಿ ಗಾಯಗಳಿದ್ದರೆ ಅರಿಶಿನ ನೀರನ್ನು ಕುಡಿಯುವುದರಿಂದ ಗಾಯವು ಮಾಗುತ್ತದೆ.

* ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶವು ಅಲ್ಜೈಮೆರ್ ಕಾಯಿಲೆಯ ಮಟ್ಟವನ್ನು ಕಡಿಮೆಗೊಳಿಸಿ, ಈ ಮರೆವಿನ ಕಾಯಿಲೆಯು ಬಾರದಂತೆ ತಡೆಯುತ್ತದೆ.

* ವಯಸ್ಸಾದಂತೆ ಕೀಲುಗಳಲ್ಲಿನ ಕಾಣಿಸಿಕೊಳ್ಳುವ ನೋವನ್ನು ಕಡಿಮೆ ಮಾಡುತ್ತದೆ.

* ನಿಯಮಿತವಾಗಿ ಅರಿಶಿನ ನೀರು ಕುಡಿಯುವುದರಿಂದ ಮೆದುಳಿನ ಕಾರ್ಯವು ಸುಧಾರಿಸುತ್ತದೆ.

* ಹೊಟ್ಟೆ ಉಬ್ಬರ, ಮಲಬದ್ಧತೆ ಮತ್ತು ಇತರ ಜೀರ್ಣಕ್ರಿಯೆಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ದೂರಾಗಿಸುತ್ತದೆ.

* ಅರಿಶಿನ ನೀರು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

* ಅರಿಶಿನದಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಇದು ಚರ್ಮವನ್ನು ಕಾಂತಿಯುತ ಹಾಗೂ ಆರೋಗ್ಯಕರವಾಗಿರಿಸುತ್ತದೆ.

* ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅನಾರೋಗ್ಯ ಸಮಸ್ಯೆ ಬಾರದಂತೆ ನೋಡಿಕೊಳ್ಳುತ್ತದೆ.

* ಅರಶಿನದಲ್ಲಿರುವ ಕರ್ಕ್ಯುಮಿನ್ ಅಂಶವು ಕೊಲೆಸ್ಟ್ರಾಲ್ ಮಟ್ಟ ಹಾಗೂ ರಕ್ತದೊತ್ತಡವನ್ನು ಕಡಿಮೆಗೊಳಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement