ಗ್ಯಾರಂಟಿ ಯೋಜನೆಯ ಜೊತೆಗೆ ಇದೀಗ ಎಲ್ಲ ಸರ್ಕಾರಿ ಕೆಲಸಗಳಿಗೆ ರೇಷನ್ ಕಾರ್ಡ್ ಅನಿವಾರ್ಯವಾಗಿದೆ.
ಚುನಾವಣೆ ಸಂಹಿತೆ ಸೇರಿದಂತೆ ಇತರೆ ಕಾರಣಗಳಿಂದ ಹೊಸ ಪಡಿತರ ಕಾರ್ಡ್ ವಿತರಣೆ ವಿಳಂಬವಾಗುತ್ತಲೇ ಸಾಗಿದ್ದು, ಜನರು ತೊಂದರೆಗೊಳಗಾಗಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ 6 ಸಾವಿರಕ್ಕೂ ಹೆಚ್ಚು ಜನ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಒಂದು ವರ್ಷವೇ ಸಂದಿದೆ. ಆದರೆ ಈ ಕುರಿತು ಇನ್ನು ಯಾವುದೇ
ಅಪ್‌ಡೇಟ್ ಇಲ್ಲದೆ ಅರ್ಜಿ: ದಾರರು ನಿತ್ಯ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಜೂನ್ 4ರ ಬಳಿಕ ಇಲಾಖೆ ಕಾರ್ಡ್‌ಗಳ ವಿಲೇ ಮಾಡಲಿದೆ ಎಂದು ವರದಿಗಳಾಗಿವೆ.